ಬೆಂಗಳೂರು: ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಮುಲುಗೆ ಭಾರೀ ಶಾಕ್ ಆಗಿದೆ.ಅವರು ಕಾಂಗ್ರೆಸ್ ನ ಅಭ್ಯರ್ಥಿ ತುಕರಾಂ ಗಿಂತ ಭಾರೀ ಅಂತರದಲ್ಲಿ ಹಿಂದುಳಿದಿದ್ದಾರೆ.
ಒಟ್ಟು ಬಿಜೆಪಿ 16 , ಕಾಂಗ್ರೆಸ್ 10 , ಜೆಡಿಎಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ಜೆಡಿಎಸ್ ನಲ್ಲಿ ಎಚ್ ಡಿ ಕುಮಾರಸ್ವಾಮಿ ಭಾರೀ ಮುನ್ನಡೆ ಗಳಿಸಿದ್ದಾರೆ.
ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ದೇಶಾದ್ಯಂತ 292 ಕ್ಷೇತ್ರಗಳಲ್ಲಿ NDA ಮುನ್ನಡೆ ಸಾಧಿಸಿದೆ.Election breaking ನಲ್ಲಿ NDAಗೆ ಬಿಗ್ ಶಾಕ್ ಆಗಿದೆ. ಉತ್ತರ ಪ್ರದೇಶದಲ್ಲಿ ಭಾರೀ ಹಿನ್ನಡೆ ಆಗಿದೆ.
ಇಂಡಿಯಾ ಕೂಟ 36 ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದೆ.
ರಾಹುಲ್ ಗಾಂಧಿಗೆ ವಯನಾಡಿನಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.ಹಾಗೇಯೇ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ ಕಾಯ್ದುಕೊಂಡಿದ್ದಾರೆ.