ನವದೆಹಲಿ:ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ದೇಶಾದ್ಯಂತ 294 ಕ್ಷೇತ್ರಗಳಲ್ಲಿ NDA ಮುನ್ನಡೆ ಸಾಧಿಸಿದೆ.
ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ಆದ ಜಾಗದಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಗಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಯನಾಡ್ ಮತ್ತು ರಾಯ್ ಬರೇಲಿ ಯಲ್ಲಿ ಮುನ್ನಡೆ ಇದೆ.ಕೊಯಮತ್ತೂರಿನಲ್ಲಿ ಬಿಜೆಪಿಯ ಅಣ್ಣಾಮಲೈಗೆ ಮುನ್ನಡೆ ಇದೆ.
ಇನ್ನೂ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮತ ಎಣಿಕೆಯಲ್ಲಿ ಶಿವಮೊಗ್ಗದಲ್ಲಿ ರಾಘವೇಂದ್ರಗೆ ಭರ್ಜರಿ ಮುನ್ನಡೆ ಇದೆ.ಅಂಚೆ ಎಣಿಕೆ ಕಾರ್ಯ ನಡೆಯುತ್ತಿದ್ದು ಬಿಜೆಪಿ ರಾಜ್ಯದಲ್ಲಿ ಒಂಬತ್ತು ಕಡೆ ಮುನ್ನಡೆ ಇದೆ.ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಇದೆ.
ಮಂಡ್ಯದಲ್ಲಿ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಮುನ್ನಡೆ ಗಳಿಸಿದ್ದಾರೆ.
ದೇಶದಲ್ಲಿ ಎನ್ಡಿಎ 294 ಕ್ಷೇತ್ರದಲ್ಲಿ ಮುನ್ನಡೆ ಇದೆ.ಇಂಡಿಯಾ ಕೂಟ 111 ಕಡೆ ಮುನ್ನಡೆ ಗಳಿಸಿದೆ.