ಬೆಂಗಳೂರು: ಕಳೆದ ರಾತ್ರಿ ಇಷ್ಟು ಮಳೆ ಸುರಿದರೂ ಮಾನ್ಯ ಡಿಸಿಎಂ ಸಾಹೇಬರು ಯಾಕೆ ಸಿಟಿ ರೌಂಡ್ಸ್ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದರು.
ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಆಗಿದ್ದರೂ ಅವರು ಇನ್ನೂ ಯಾಕೋ ನಗರ ಪ್ರದಕ್ಷಿಣೆಗೆ ಹೋಗಿಲ್ವಾ? ಶೋ ಕೊಡುವುದಕ್ಕೆ ಕಳೆದ ವಾರ ಹೋಗಿದ್ದರಲ್ಲ? ಆಗ ಏನು ಕ್ರಮ ಕೈಗೊಂಡಿದ್ದರು ಇವರು? ಕೆರೆಗಳನ್ನು ನುಂಗಿ ನೀರು ಕುಡಿದರಲ್ಲಾ..? ಯಾವ ಪುರುಷಾರ್ಥಕ್ಕೆ ನಗರ ಪ್ರದಕ್ಷಿಣೆ ಮಾಡುತ್ತಾರೆ? ಡಿಸಿಎಂ ಅಂತಿದ್ರಪ್ಪ.. ಹೋಲ್ ನೈಟ್ ಓಡಾಡ್ತೀನಿ ಅಂತ. ಅದೇನು ನಿದ್ದೆ ಮಾಡ್ತಾ ಇದ್ರೊ ಗೊತ್ತಿಲ್ಲ ಎಂದು ಕುಟುಕಿದರು ಮಾಜಿ ಮುಖ್ಯಮಂತ್ರಿಗಳು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣದ ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ನೇರ ಹೊಣೆ: HDK ಗಂಭೀರ ಆರೋಪ
‘ಬ್ರದರ್’ ಎನ್ನುವ ಕಾರಣಕ್ಕೆ ಸಿದ್ಧರಾಮಯ್ಯ ಸರ್ಕಾರ ‘ಈ ಪೆಡ್ಲರ್’ಗೂ ‘ಅಮಾಯಕ’ ಪಟ್ಟ ಕಟ್ಟಿದರೆ ಅಚ್ಚರಿ ಇಲ್ಲ: ಬಿಜೆಪಿ