ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕೆಕ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಪತ್ತೆಗೆ ಎಸ್ ಐಟಿ ಮಹತ್ವದ ಕ್ರಮ ಕೈಗೊಂಡಿದ್ದು, ಮೊಬೈಲ್ ಕರೆ ಆಧರಿಸಿ ಭವಾನಿ ರೇವಣ್ಣ ಪತ್ತೆ ಮಾಡಿ ಬಂಧಿಸಲು ಸಿದ್ದತೆ ನಡೆಸಿದೆ.
ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಎರಡು ಬಾರಿ ನೋಟಿಸ್ ನೀಡಿದೆ. ಆದರೂ ಭವಾನಿ ರೇವಣ್ಣ ವಿಚಾರಣೆಗೆ ಗೈರಾಗಿದ್ದಾರೆ. ಬಂಧನದ ಭೀತಿಯಲ್ಲಿ ಅವರು ನಾಪತ್ತೆಯಾಗಿದ್ದಾರೆ.
ಭವಾನಿ ರೇವಣ್ಣಗೆ ಹುಡುಕಾಟ ನಡೆಸಿರುವ ಎಸ್ ಐಟಿ ಅಧಿಕಾರಿಗಳು ಕಲೆದ ಎರಡು ದಿನಗಳಿಂದ ಹಾಸನ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿನ ಭವಾನಿ ನಿವಾಸಗಳು, ಸಂಬಂಧಿಕರು, ಸ್ನೇಹಿತರು, ಆಪ್ತರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದೆ. ಒಂದು ವೇಳೆ ಇಂದು ಭವಾನಿ ರೇವಣ್ಣ ಪತ್ತೆಯಾಗದಿದ್ದಾರೆ. ಮೊಬೈಲ್ ಕರೆ ಆಧರಿಸಿ ಪತ್ತೆಗೆ ಎಸ್ ಐಟಿ ತಂಡ ಕ್ರಮ ಕೈಗೊಂಡಿದೆ.








