ಬೆಂಗಳೂರು: ನಿನ್ನೆ ಎಸ್ ಐಟಿ ಬಂಧಿಸಿದ್ದಂತ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರ ತೀರ್ಪು 4.15ಕ್ಕೆ ಕಾಯ್ದಿರಿಸಿದೆ. ಈ ನಡುವೆ ತನಿಖೆಗೆ ಸಹಕರಿಸಲು ಪ್ರಜ್ವಲ್ ಸಿದ್ಧರಿದ್ದಾರೆ ಅಂತ ನ್ಯಾಯಾಲಯಕ್ಕೆ ಪ್ರಜ್ವಲ್ ಪರ ವಕೀಲ ಅರುಣ್ ಮಾಹಿತಿ ನೀಡಿದ್ದಾರೆ.
ಇಂದು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಕುರಿತಾದಂತ ಪ್ರಕರಣದ ವಿಚಾರಣೆ ನಡೆಸಿತು. ಕೋರ್ಟ್ ಮುಂದೆ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಹಾಜರುಪಡಿಸಿದರು. ಪ್ರಜ್ವಲ್ನ್ನ ಬಂಧಿಸಿ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.
ಪ್ರಜ್ವಲ್ ರೇವಣ್ಣ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ನಂತ್ರ, ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಎಸ್ಐಟಿ ಪರ ವಕೀಲರು ವಾದ ಮಂಡಿಸಿದರು.
ನ್ಯಾಯಾಧೀಶರ ಮುಂದೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಬಗ್ಗೆ ವಾದ ಮಂಡನೆ ಮಾಡಿದಂತ ಎಸ್ಐಟಿ ಪರ ವಕೀಲರು, ಇವನು ಒಬ್ಬ ವಿಕೃತ ಕಾಮಿ ಎನ್ನಿಸುತ್ತಿದೆ. ಇವರು ತುಂಬಾ ಡೇಂಜರ್ ಇದ್ದಾನೆ. ಸಂತ್ರಸ್ತ ಮಹಿಳೆ ಹೇಳಿಕೆ ಪ್ರಕಾರ ಅತ್ಯಾಚಾರ ಮಾಡಿದ್ದಾನೆ. 100 ಕ್ಕೂ ಹೆಚ್ಚು ಸಂತ್ರಸ್ತಯರು ಇದ್ದಾರೆ. ಮೀಡಿಯಾದಲ್ಲಿ ಸುದ್ದಿ ಅಗಬಾರದು ಅಂತ ಸ್ಟೇ ತಂದಿದ್ದಾರೆ ಎಂದು ಹೇಳಿದರು.
ವಾಟ್ ಆ್ಯಪ್ ಕಾಲ್ ಮಾಡಿ ಬಟ್ಟೆ ಬಿಚ್ಚಲು ಹೇಳಿದ್ದಾನೆ. ಹೀಗಾಗಿ ಪ್ರಜ್ವಲ್ ನ್ನ ತನಿಖೆ ಮಾಡಬೇಕಿದೆ ಎಂಬುದಾಗಿ ಸರ್ಕಾರಿ ಪರ ವಕೀಲರು ವಾದ ಮಂಡನೆ ಮಾಡಿದರು.
ವಿಡಿಯೋ ಮಾಡಿರೋ ಮೊಬೈಲ್ ಪತ್ತೆ ಮಾಡಬೇಕಿದೆ. ಜೊತೆಗೆ ಹಲವು ಸಾಕ್ಷಿಗಳ ನ್ನ ಪತ್ತೆ ಮಾಡಬೇಕಿದೆ. ಇತ ದೇಶ ಬಿಟ್ಟು ಹೋಗಿದ್ದರು. ವಾಪಸು ಬರುವ ಉದ್ದೇಶ ಇರಲಿಲ್ಲ. ಇದನ್ನು ಎಲ್ಲಾ ತನಿಖೆ ಮಾಡಬೇಕಿದೆ ಅಂತ ಸರ್ಕಾರಿ ಪರ ವಕೀಲರು ವಾದ ಮಂಡನೆ ಮಾಡಿದರು.
ಯಾಕೆ ವಿದೇಶಕ್ಕೆ ಹೋಗಿದ್ದ ಅಂತ ಇಲ್ಲಿಯವರೆಗೆ ಪ್ರಜ್ವಲ್ ಹೇಳಿಲ್ಲ. ಆರೋಪಿ ವಿಚಾರಣೆ ತುಂಬಾ ಅಗತ್ಯ ಇದೆ. ಸಂತ್ರಸ್ತರಿಗೆ ಎದುರಿಸಿ ಕಿರುಕುಳ ನೀಡಿದ್ದಾನೆ. ಇದು ದೊಡ್ಡ ಇಶ್ಯೂ ಆಗಿದೆ. ನಿನ್ನೆ ಹಾಸನದಲ್ಲಿ ಪ್ರತಿಭಟನೆ ಅಗಿದೆ. ಪ್ರಜ್ವಲ್ ವಿಚಾರಣೆ ಅಗತ್ಯ ಇದೆ ಅಂತ ಸರ್ಕಾರಿ ಪರ ವಕೀಲರು ವಾದಿದರು.
ಆರೋಪಿ ಬಗ್ಗೆ ಸಾಕಷ್ಟು ಸಾಕ್ಷಿಗಳು ಇದ್ದಾವೆ. ಆರೋಪಿ ಕೃತ್ಯದಿಂದ ತುಂಬಾ ಮನೆಗಳಲ್ಲಿ ಒಡಕು ಬಂದಿದೆ. ಮನೆಗಳಲ್ಲಿ ಗಂಡಂದಿರು ಅನುಮಾನ ಪಡುತ್ತಿದ್ದಾರೆ. 15 ದಿನ ಕಸ್ಟಡಿಗೆ ನೀಡಿ ಅಂತ ಎಸ್ಐಟಿ ಪರ ವಕೀಲರು ವಾದ ಮಂಡಿಸಿದರು.
ಈ ಬಳಿಕ ಪ್ರಜ್ವಲ್ ಪರ ವಕೀಲರಿಂದ ವಾದ ಮಂಡನೆ ಮಾಡಿ ಆರೋಪಿ ಬಗ್ಗೆ ಸಾಕ್ಷಿ ಇಲ್ಲ. ವಿಡಿಯೋ ಮಾಡಿದ್ದಾನೆ ಎನ್ನಲಾದ ಡಿವೈಸ್ ಇಲ್ಲ. ಆರೋಪಿ ಎಸ್ಐಟಿ ಮುಂದೆ ಶರಣಾಗಿದ್ದಾನೆ. 15 ದಿನ ಕಸ್ಟಡಿಗೆ ಕೇಳುವುದು ನ್ಯಾಯ ಬದ್ದ ಅಲ್ಲ. ಕಸ್ಟಡಿಗೆ ಕೊಡಿ ಬೇಡಿ ಅನ್ನಲ್ಲ. ಕೊಟ್ಟರೆ ಒಂದು ದಿನ ಮಾತ್ರ ಕೊಡಿ ಅಂತ ಪ್ರಜ್ವಲ್ ಪರ ವಕೀಲ ಅರುಣ್ ವಾದ ಮಂಡಿಸಿದರು.
ವಾದ ಪ್ರತಿ ವಾದ ಆಲಿಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರು, ಸಂಜೆ 4-15 ಕ್ಕೆ ತೀರ್ಪು ಕಾಯ್ದಿರಿಸಿದರು. ಹೀಗಾಗಿ ಸಂಜೆ 4-15ಕ್ಕೆ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ವಶವೋ ಅಥವಾ ನ್ಯಾಯಾಂಗ ಬಂಧನವೋ ಅನ್ನೋದು ತಿಳಿಯಲಿದೆ. ಈ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಭವಿಷ್ಯ ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ.
ಕಾಂಗ್ರೆಸ್ ಸರಕಾರ ಕರ್ನಾಟಕ ರಾಜ್ಯವನ್ನು ಮುಸ್ಲಿಂ ರಾಜ್ಯವೆಂದು ಘೋಷಣೆ ಮಾಡಲಿ: ಕೆ.ಎಸ್ ಈಶ್ವರಪ್ಪ ಸವಾಲು