*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಜೆಡಿಎಸ್ ಮುಖಂಡ, ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಬಂಧಿಸಲಾಗಿದೆ (arrested).
ಹಾಸನದ 33 ವರ್ಷದ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಅವರ ವಿರುದ್ಧದ ಆರೋಪಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ವಿಮಾನ ನಿಲ್ದಾಣದಿಂದ ವಶಕ್ಕೆ ತೆಗೆದುಕೊಂಡಿದೆ. ದೇಶವನ್ನು ತೊರೆದ ಸುಮಾರು ಒಂದು ತಿಂಗಳ ನಂತರ ಅವರು ಗುರುವಾರ ಮಧ್ಯರಾತ್ರಿ ಜರ್ಮನಿಯಿಂದ ಭಾರತಕ್ಕೆ ಮರಳಿದರು.
ಕೋರ್ಟ್‌ನಲ್ಲಿ ವಾದ-ಪ್ರತಿ ವಿವಾದ ಆಗಿದ್ದೇನು?
ಈ ನಡುವೆ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಕೆಲ ನಿಮಿಷಗಳ ಹಿಂದೆ, ಬೆಂಗಳೂರಿನ 42 ನೇ ಎಸಿಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್ ಶಿವಕುಮಾರ್ ಅವರ ಮುಂದೆ ಹಾಜರು ಪಡಿಸಿದರು, ಈ ವೇಳೆ ಎಸ್‌ಐಟಿ (SIT) ಪರ ಎಸ್‌ಪಿಪಿ ಅಶೋಕ್ ನಾಯಕ್ ಅವರು ವಾದ ಮಂಡನೆ ಮಾಡಿದರು. 15 ದಿನಗಳ ಕಾಲ ಎಸ್‌ಐಟಿ (SIT) ಕಸ್ಟಡಿಗೆ ನಿಡುವಂತೆ ಮನವಿ ಮಾಡಿದರು,. ಆದರೆ ನ್ಯಾಯಾಧೀಶರು 6 ದಿನಗಳ ಕಾಲ ಎಸ್‌ಐಟಿ(SIT) ಕಸ್ಟಡಿಗೆ ನೀಡಿ ಆದೇಶವನ್ನು ಹೊರಡಿಸಿದರು
ಅರ್ಜಿ ವಿಚಾರಣೆ ವೇಳೆ ಎಸ್‌ಐಟಿ ಅಧಿಕಾರಿಗಳು ನೀಡಿರುವ ಕೇಸ್ ಡೈರಿಯನ್ನು ನ್ಯಾಯಾಧೀಶರಿಗೆ ನೀಡಿದರು, ಇದೇ ವೇಳೆ ನ್ಯಾಯಾಧೀಶರು ಪರಿಶೀಲನೆ ಮಾಡಿದರು. ಇನ್ನೂ ಇದೇ ವೇಳೆ ಪ್ರಜ್ವಲ್ ರೇವಣ್ಣ ನ್ಯಾಯಾಧೀಶರ ಮುಂದೆ ಕೈಕಟ್ಟಿಕೊಂಡು ನಿಂತುಕೊಂಡು ಎಲ್ಲವನ್ನು ಕೂತುಹಲದಿಂದ ನೋಡುತ್ತಿದ್ದರು.
ಇದೇ ವೇಳೆ ಸರ್ಕಾರಿ ಪರ ವಕೀಲರು ನ್ಯಾಯಾಧೀಶರ ಮುಂದೆ ಇದೊಂದು ನೀಚ ಕೃತ್ಯವಾಗಿದ್ದು, ವಾಟ್ಸಾಪ್ ಕಾಲ್ ಮಾಡಿ ಬಟ್ಟೆ ಬಿಚ್ಚಿ ಅಂತ ಹೇಳಿದ್ದ ಅಂಥ ಹೇಳಿದರು. ಇನ್ನೂ ಇನ್ನೂ ಹಲವು ಮಂದಿ ಸಂತ್ರಸ್ಥೆಯರು ಇದ್ದಾರೆ ಅಂಥ ಹೇಳಿದರು. ಇದಲ್ಲದೇ ಈತ ಹೊರ ದೇಶಕ್ಕೆ ಹೋಗಲು ಹಲವರ ಪಾತ್ರವಿದೆ. ಇನ್ನೂ ವಿಡಿಯೋ ವೈರಲ್ ನಂತರ ಹಲವು ಮಂದಿ ಭಯದಿಂದ ಮಹಿಳೆಯರು ಜೀವನ ಕಳೆಯುತ್ತಿದ್ದಾರೆ ಅಂಥ ಹೇಳಿದ ಅವರು, ವಿಡಿಯೋ ವೈರಲ್ ಆದ ನಂತರ ದೇಶ ಬಿಟ್ಟ ಹೋಗಿದ್ದರು ಅಂತ ಹೇಳಿದರು.
ಹಲವು ದಾಖಲೆಗಳು ವಶಪಡಿಸಿಕೊಳ್ಳಬೇಕಾಗಿದೆ, ಇದಲ್ಲದೇ ಈತನ ಮೊಬೈಲ್‌ನಲ್ಲಿ ಈತನಲ್ಲದೇ ಇನ್ನೊಬ್ಬರ ಫೇಸ್ ಲಾಕ್ ಇಡಲಾಗಿದೆ. ತನ್ನದೇ ಆದ ಲೈಂಗಿಕ ಕೆಲಸದ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಇನ್ನೂ ರಾಜತಾಂತ್ರಿಕ ಪಾಸ್‌ಪೋರ್ಟ್ ದುರುಪಯೋಗ ಪಡಿಸಿಕೊಂಡು ದೇಶದಿಂದ ಪರಾರಿಯಾಗಿದ್ದರು. ತಪ್ಪಿಸಿಕೊಂಡು ಹೋಗುವ ಉದ್ದೇಶದಿಂದಲೇ ಅವರು ಭಾರತ ಬಿಟ್ಟು ಹೋಗಿದ್ದರು. ವಿಮಾನ ಬುಕ್ ಮಾಡಿ ಹಲವು ಬಾರಿ ಕ್ಯಾನ್ಸಲ್ ಮಾಡಿದ್ದಾರೆ ಅಂಥ ವಾದ ಮಾಡಿದರು. ಆರೋಪಿ ಪರ ವಕೀಲರು ಆರೋಪಿ ಪ್ರವಾಸದಲ್ಲಿ ಇದ್ದಾರೆ ಅಂಥ ಹೇಳಿದ್ದಾರು, ಆದರೆ ಅವರು ದೇಶವನ್ನು ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ನೀಡಿಲ್ಲ ಅಂದರು. ವಿದೇಶದಲ್ಲಿ ಬಂಧನ ತಪ್ಪಿಸಿಕೊಳ್ಳುವ ಸಲುವಾಗಿ ಅವರು ಭಾರತಕ್ಕೆ ವಾಪಸ್ಸು ಬಂದಿದ್ದಾರೆ ಅಂಥ ನ್ಯಾಯಧೀಶರಿಗೆ ಮನವಿ ಮಾಡಿದರು. ಈ ಕೇಸ್‌ನಲ್ಲಿ ಜೀವಾವಧಿ ಕೂಡನೀಡಬಹುದಾಗಿದೆ ಅಂಥ ಹೇಳಿದರು.
ಇನ್ನೂ ಪ್ರಜ್ವಲ್ ಪರ ವಕೀಲ ಅರುಣ್ ಅವರು ಈ ಸಂತ್ರಸ್ಥೆಯ ಯಾವುದೇ ದೃಶ್ಯ ರೆಕಾರ್ಡ್ ಆಗಿಲ್ಲ, ನಾಲ್ಕು ವರ್ಶದ ಹಳೆಯ ಪ್ರಕರಣ ಅಂತ ದೂರಿನಲ್ಲಿ ಉಲ್ಲೇಕ ಮಾಡಲಾಗಿದೆ ಅಂತ ಹೇಳಿದರು. ಇದಲ್ಲದೇ ಕಸ್ಟಡಿಗೆ ನೀಡುವ ಅವಕಾಶವಿಲ್ಲ, ಒಂದು ಸಾಕು ಅಂಥ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡರು.
ಇದಕ್ಕೂ ಮುನ್ನ ಪ್ರಜ್ವಲ್ ರೇವಣ್ಣನವರನ್ನು ವೈದ್ಯಕೀಯ ಟೆಸ್ಟ್ ಸಲುವಾಗಿ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H.D. Deve Gowda) ಅವರ ಮೊಮ್ಮಗ ಎಚ್.ಡಿ.ರೇವಣ್ಣ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.