ಶಿವಮೊಗ್ಗ: ಕಾಂಗ್ರೆಸ್ ಸರಕಾರ ಕರ್ನಾಟಕ ರಾಜ್ಯವನ್ನು ಮುಸ್ಲಿಂ ರಾಜ್ಯವೆಂದು ಘೋಷಣೆ ಮಾಡಲಿ ಅಂತ ಮಾಜಿ ಡಿ.ಸಿಎಂ ಕೆ.ಎಸ್ ಈಶ್ವರಪ್ಪನವರು ಸವಾಲು ಹಾಕಿದ್ದಾರೆ.
ದಾವಣಗೆರೆಯಲ್ಲಿ ನಡೆದ ಆದಿಲ್ ಸಾವು ಪ್ರಕರಣದಲ್ಲಿ ಪೊಲೀಸ್ ಠಾಣೆ ಮೇಲೆಯೇ ದಾಳಿ ಮಾಡಲಾಗಿದೆ. ಪೊಲೀಸ್ ಠಾಣೆಗಳಿಗೆ ರಕ್ಷಣೆ ಕೊಡಬೇಕಿದೆ. ರಾಜ್ಯ ಸರಕಾರ ಮುಸ್ಲಿಮರ ಪರವಾಗಿದೆ ಆ ಕಾರಣಕ್ಕಾಗಿಯೇ ರಾಜ್ಯದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಅಂಥ ಅವರು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರದರು. ಇದೇ ವೇಳೇ ಅವರು ಪದವೀಧರರಿಗೆ ಗುಂಡು ಪಾರ್ಟಿ ಕೊಡುವ ಮೂಲಕ ಈ ಚುನಾವಣೆಯನ್ನು ಸರ್ಜಿ ಗುಂಡುಪಾರ್ಟಿಯನ್ನಾಗಿ ಬದಲಾಯಿಸಿದ ಅಪಕೀರ್ತಿ ಬಿಜೆಪಿಯ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರಿಗೆ ಸೇರುತ್ತದೆ ಎಂದು ಅಂತ ಹೇಳಿದರು. ಧನಂಜಯ ಸರ್ಜಿಯವರು ಖಂಡಿತ ಸೋಲುತ್ತಾರೆ ಎಂದರು. ರಘುಪತಿ ಭಟ್ ಅವರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ. ಅವರ ಕ್ಷೇತ್ರದಲ್ಲಿ ಅವರನ್ನು ತುಂಬಾ ಪ್ರೀತಿಸುತ್ತಾರೆ ಅಂತ ಹೇಳಿದರು.