ಬೆಂಗಳೂರು; ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಎಸ್‌ಐಟಿ ಅಧಿಕಾರಿಗಳ ವಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಇಂದು ಪ್ರಾಥಮಿಕ ತನಿಖೆಯನ್ನು ಅಧಿಕಾರಿಗಳು ಕಚೇರಿಯಲ್ಲಿ ಮಾಡುತ್ತಿದ್ದಾರೆ.
ಈ ನಡುವೆ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋ ಮಾಡಿರುವ ಮೊಬೈಲ್ ಈಗ ಅವರ ಬಳಿ ಇಲ್ಲ ಎನ್ನಲಾಗಿದೆ. ಹಳೆಯ ಮೊಬೈಲ್ ಅನ್ನು ಪ್ರಜ್ವಲ್ ರೇವಣ್ಣನವರು ನಾಶ ಪಡಿಸುವ ಸಾಧ್ಯತೆಗಳು ಇದೇ ಎನ್ನಲಾಗಿದೆ. ಸದ್ಯ ಪ್ರಜ್ವಲ್ ರೇವಣ್ಣನವರ ಬಳಿ ಇರುವ ಮೊಬೈಲ್ ಹೊಸದ್ದು ಎನ್ನಲಾಗಿದ್ದು, ಸದ್ಯ ಅವರ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ ಹಾಗೂ ಫೋಟೋಗಳು ಕಂಡು ಬಂದಿಲ್ಲ ಎನ್ನಲಾಗಿದೆ.