ತುಮಕೂರು: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ, ಆಕೆಯ ತಲೆಯನ್ನು ಕಡಿದು ಚರ್ಮ ಸುಲಿದ ಭೀಕರ ಘಟನೆ ನಡೆದಿರುವ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪಟ್ಟಣದಲ್ಲಿ ನಡೆದಿದೆ.
ಶಿವರಾಮ ಕೊಲೆ ಆರೋಪಿಯಾಗಿದ್ದುಮಂಗಳವಾರ ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾದ ಪತ್ನಿಯ ಕತ್ತು ಕತ್ತರಿಸಿ ಕೊಂದ ನಂತರ ಇಡೀ ರಾತ್ರಿ ದೇಹದ ಚರ್ಮ ಸುಲಿದು, ಅಂಗಾಂಗಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ ಎನ್ನಲಾಗಿದೆ.
ಸೋಮವಾರ ರಾತ್ರಿ ಊಟ ಕೊಡಲಿಲ್ಲ ಎಂಬ ಕಾರಣಕ್ಕೆ ಸಾಮಿಲ್ ಕಾರ್ಖಾನೆಯ ಕಾರ್ಮಿಕ ಶಿವರಾಮ ತನ್ನ ಪತ್ನಿ ಪುಷ್ಪಾಳಿಗೆ ಚಾಕುನಿಂದ ಇರಿದಿದ್ದಾನೆ. ಬಳಿಕ ಆಕೆಯ ತಲೆಯನ್ನು ಮಚ್ಚಿನಿಂದ ತುಂಡರಿಸಿ, ಆಕೆಯ ದೇಹದ ಕೆಲವು ಭಾಗಗಳನ್ನು ಕತ್ತರಿಸಿ, ಬೆಳಗಾಗುವವರೆಗೂ ದೇಹದ ಚರ್ಮ ಸುಲಿದಿದ್ದಾನೆ ಎನ್ನಲಾಗಿದೆ.
ಶಿವರಾಂ ತನ್ನ ಹೆಂಡತಿಯ ಕತ್ತರಿಸಿದ ತಲೆಯೊಂದಿಗೆ ಶವದ ಬಳಿ ಕುಳಿತಿರುವುದು ಕಂಡುಬಂದಿದೆ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಶಿವರಾಮ್ ಮರಗೆಲಸದಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ತನ್ನ 35 ವರ್ಷದ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನು. ಸೋಮವಾರ ರಾತ್ರಿ ಪುಷ್ಪಲತಾ ಶಿವರಾಂಗೆ ಊಟ ಬಡಿಸಲು ನಿರಾಕರಿಸಿದ್ದಳು. ಈ ಬಗ್ಗೆ ಇಬ್ಬರ ನಡುವೆ ಜಗಳವಾಡಿದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿವರಾಂ ಮತ್ತು ಪುಷ್ಪಲತಾ ದಂಪತಿಗೆ ಎಂಟು ವರ್ಷದ ಮಗನಿದ್ದು, ಘಟನೆಯ ಸಮಯದಲ್ಲಿ ಮಲಗಿದ್ದ. “35 ವರ್ಷದ ಮಹಿಳೆ, ಆಕೆಯ ಪತಿ ಕೂಡ ಸ್ಥಳದಲ್ಲಿದ್ದರು. ವಿಚಾರಣೆ ವೇಳೆ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.