ಬೆಂಗಳೂರು : ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮೇ 31ರಂದು ಮಧ್ಯರಾತ್ರಿ 12.30ರ ಸುಮಾರಿಗೆ ಜರ್ಮನಿಯಿಂದ ಬೆಂಗಳೂರಿಗೆ ಬಂದಿಳಿದ ಕೆಲವೇ ನಿಮಿಷಗಳಲ್ಲಿ ಎಸ್ಐಟಿ ಬಂಧಿಸಿದೆ.
ಈ ನಡುವೆ ಮ್ಯೂನಿಚ್ನಿಂದ ಆಗಮಿಸಿದ 33 ವರ್ಷದ ಸಂಸದರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆಗಾಗಿ ಸಿಐಡಿ ಕಚೇರಿಗೆ ಕರೆದೊಯ್ಯಿತು.
ಇನ್ನೂ ಇಮಿಗ್ರಶನ್ ಸಾಲಿನಲ್ಲಿ ನಿಂತಿದ್ದ ವೇಳೆಯಲ್ಲಿ ಎಸ್ಐಟಿ ಅಧಿಕಾರಿಗಳನ್ನು ಕಂಡು ದಂಗಾದ ಸಂಸದ ಪ್ರಜ್ವಲ್ ರೇವಣ್ಣ ನನ್ನ ಟಚ್ ಮಾಡಬೇಡಿ, ನಾನೇ ನಿಮ್ಮೊಂದಿಗೆ ಬರಲಿದ್ದೇವೆ ಅಂಥ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಬಂಧನದ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೋಲಿಸ್ ಸಿಬ್ಬಂದಿಗಳೇ ಇರೋದು ವಿಶೇಶವಾಗಿದೆ. ಇದಲ್ಲದೇ ಬಂಧನದ ವೇಳೇ ಪ್ರಜ್ವಲ್ ರೇವಣ್ಣ ನಾನು ನಮ್ಮ ವಕೀಲರಿಗೆ ಕರೆ ಮಾಡುತ್ತೇವೆ ಅಂಥ ಹೇಳಿದ್ದಾರೆ, ಆದರೆ ಈ ವೇಳೆ ಅಧಿಕಾರಿಗಳು ಅವರ ಬಳಿ ಇದ್ದ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಜ್ವಲ್ ರೇವಣ್ಣನವರಿಗೆ ಬಂಧನ ಬಗ್ಗೆ ಮಾಹಿತಿ ನೀಡಿ ಬಳಿಕ ಕಾನೂನು ಪ್ರಕ್ರಿಯೆಗಳು ಪೂರ್ಣ ಗೊಂಡ ಬಳಿಕ ಅವರನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.