ಬೆಂಗಳೂರು: ಅಶ್ಲೀಲ ವೀಡಿಯೋ ಕೇಸ್ ಬಳಿಕ ವಿದೇಶಕ್ಕೆ ಹಾರಿದ್ದಂತ ಸಂಸದ ಪ್ರಜ್ವಲ್ ರೇವಣ್ಣ ಮೇ.31ರ ನಾಳೆ ಬೆಂಗಳೂರಿಗೆ ಬರಲಿದ್ದಾರೆ ಎನ್ನಲಾಗಿತ್ತು. ಆದ್ರೇ ಇಂದೇ ಬೆಂಗಳೂರಿಗೆ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಾರೆ. ಈಗಾಗಲೇ ಮ್ಯೂನಿಚ್ ಏರ್ ಪೋರ್ಟ್ ಗೆ ಆಗಮಿಸಿದ್ದಾರೆ.
ಹಾಸನ ಪೆನ್ ಡ್ರೈವ್ ವೈರಲ್ ಕೇಸ್, ಅಶ್ಲೀಲ ವೀಡಿಯೋ ಕೇಸ್, ಮಹಿಳೆ ಅಪಹರಣ ಪ್ರಕರಣಗಳನ್ನು ಎದುರಿಸುತ್ತಿರೋ ಸಂಸದ ಪ್ರಜ್ವಲ್ ರೇವಣ್ಣ ಅವರು, ನಿರೀಕ್ಷಣಾ ಜಾಮೀನು ಕೋರಿ ವಿದೇಶದಿಂದಲೇ ನಿನ್ನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಾಳೆ ನಡೆಸಲಿದೆ.
ಈ ಬೆನ್ನಲ್ಲೇ ಜರ್ಮನಿಯ ಮ್ಯೂನಿಜ್ ಏರ್ ಪೋರ್ಟ್ ಗೆ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸಿದ್ದಾರೆ. ಅಲ್ಲಿ ಅವರು ಲಗೇಜ್ ಚೆಕ್ ಇನ್ ಮಾಡಿರೋದಾಗಿ ತಿಳಿದು ಬಂದಿದೆ. 2 ಟ್ರಾಲಿ ಬ್ಯಾಗ್ ಸಮೇತ ಮ್ಯೂನಿಜ್ ಏರ್ ಪೋರ್ಟ್ ಗೆ ಸಂಸದ ಪ್ರಜ್ವಲ್ ರೇವಣ್ಣ ಬಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಜರ್ಮನಿಯ ಮ್ಯೂನಿಚ್ ನಿಂದ ಲುಫ್ತಾ ಏರ್ ಲೈನ್ಸ್ ವಿಮಾನದ ಮೂಲಕ ಬೆಂಗಳೂರಿಗೆ ಇಂದೇ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸಲಿದ್ದಾರೆ. ಅವರನ್ನು ಎಸ್ಐಟಿ ಪೊಲೀಸರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಏರ್ ಪೋರ್ಟ್ ನಲ್ಲೇ ಬಂದಿಸೋ ಸಾಧ್ಯತೆ ಇದೆ. ಆ ಬಗ್ಗೆ ಕಾದು ನೋಡಬೇಕಿದೆ.
Fact Check: ಸ್ಯಾಂಡಲ್ ವುಡ್ ‘ನಟ ಪ್ರಜ್ವಲ್ ದೇವರಾಜ್’ ಇನ್ನಿಲ್ಲ.?: ಇಲ್ಲಿದೆ ವೈರಲ್ ಸುದ್ದಿಯ ‘ಅಸಲಿ ಸತ್ಯ’
ಗೂಗಲ್ ನಿಂದ ಮಲೇಷ್ಯಾದಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆ, 2030ರ ವೇಳೆಗೆ 26,000 ಉದ್ಯೋಗ ಸೃಷ್ಟಿ!