ಬಾಗಲಕೋಟೆ : ಬಾಗಲಕೋಟೆಯ ಮಹಾಲಿಂಗಾಪುರದಲ್ಲಿ ಗರ್ಭಪಾತ ಮಾಡಿಸಿಕೊಂಡು ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಹಾಲಿಂಗಪುರದ ಕವಿತಾ ಬಾಡನವರ, ಮಹಾರಾಷ್ಟ್ರದ ದೂದ್‌ಗಾವ್‌ನ ಸಂಜಯ ಗೌಳಿ, ಸಂಗೀತಾ ಸಂಜಯ ಗೌಳಿ, ವಿಜಯ ಸಂಜಯ ಗೌಳಿ, ಕುಪ್ವಾಡದ ಮಾರುತಿ ಬಾಬುಸೋ ಖರಾತ್, ಒಬ್ಬರು ಸೋನೊಗ್ರಾಫರ್, ಅಥಣಿಯ ಡಾ.ಕೋತ್ವಾಲೆ ವಿರುದ್ಧ ಸಾಂಗ್ಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ವಿಜಯ ಸಂಜಯ ಗೌಳಿ, ಡಾ.ಮಾರುತಿ ಬಾಬುಸೋ ಖರಾತ್, ಕವಿತಾ ಬಾಡನವರ ಅವರನ್ನು ಬಾಗಲಕೋಟೆಯ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.