ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಜರ್ಮನಿಂದ ಬೆಂಗಳೂರಿಗೆ ವಾಪಸ್ ಆಗಲು ಇಂದು ಟಿಕೆಟ್ ಬುಕ್ ಆಗಿದೆ ಎಂದು ವರದಿಯಾಗಿದೆ.
ಜರ್ಮನಿಗೆ ತೆರಳಲು ಲುಪ್ತಾನ್ಸಾ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಫ್ರಾಂಕ್ ಫರ್ಟ್ ನಿಂದ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದು, ಇಂದು ಮಧ್ಯಾಹ್ನವೇ ಹೊರಡಲಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನ 1.30 ಕ್ಕೆ ಫ್ರಾಂಕ್ ಫರ್ಟ್ ನಿಂದ ವಿಮಾನವು ಹೊರಡಲಿದ್ದು, ರಾತ್ರಿ 12.30 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಈಗಾಗಲೇ ಎಸ್ ಐಟಿ ತಂಡ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದೆ. ಪ್ರಜ್ವಲ್ ವಿಮಾನ ನಿಲ್ದಾಣ ಪ್ರವೇಶಿಸುದ್ದಿಂತ ವಶಕ್ಕೆ ಪಡೆಯಲಿದೆ.