ಯಾವುದೇ ಕೆಲಸವಾಗಲೀ ಅದಕ್ಕೆ ಆರಂಭ, ಅಂತ್ಯ ಇರುತ್ತದೆ. ಹಿರಿಯರು ಒಂದು ಮಾತು ಹೇಳುತ್ತಿದ್ದರು. ಅದೇನೆಂದರೆ ಗುರುವಾರ ಈ ಕೆಲಸ ಮಾಡಬೇಡಿ. ಈ ಕೆಲಸ ಆದರೆ ಮಾಡಬಹುದೆಂದು..! ಯಾಕೆಂದರೆ ಕೆಲವೊಂದು ನಮ್ಮ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಬಹುದು.
ಬ್ರಹ್ಮಸ್ಪತಿಗೆ ಇಷ್ಟವಾಗದ ಕೆಲಸವನ್ನು ಗುರುವಾರ ಮಾಡಬಾರದು. ಸುಖ ಪರಿವಾರ, ಶಿಕ್ಷಣ , ಜ್ಞಾನ ಹಾಗೂ ಹಣದ ಮೇಲೆ ಇದು ಪರಿಣಾಮ ಬೀರಬಹುದು. ಮೊದಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಗುರುವಾರ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಲೇಬೇಡಿ. ಪೋಷಕರು, ಗುರು, ಶಿಕ್ಷಕರು ಬ್ರಹ್ಮಸ್ಪತಿಯ ಪ್ರತಿರೂಪ. ಹೀಗಾಗಿ ಇವರನ್ನ ಅವಮಾನ ಮಾಡಬೇಡಿ. ಕಿಚಡಿಯನ್ನ ಮನೆಯಲ್ಲಿ ತಯಾರಿಸಬೇಡಿ. ಹಾಗೆಯೇ ಗುರುವಾರ ಕಿಚಡಿಯನ್ನ ತಿನ್ನಬೇಡಿ. ಗುರುವಾರ ಉಗುರು ಕತ್ತರಿಸಬೇಡಿ. ಗುರುವಾರದಂದು ಮಹಿಳೆಯರು ತಲೆಗೆ ಸ್ನಾನ ಮಾಡಬಾರದು. ಯಾಕೆಂದರೆ ಗುರುವಾರ ಸ್ನಾನ ಮಾಡಿದರೇ ಆಸ್ತಿ ಹಾಗೂ ಸಮೃದ್ದಿಯಲ್ಲಿ ನಷ್ಟವುಂಟಾಗುತ್ತದೆ.
ಗುರುವಾರ ಬಟ್ಟೆ ಹೊಗೆಯಬಾರದೆಂದು ಶಾಸ್ತ್ರವೊಂದರಲ್ಲಿ ಹೇಳಲಾಗಿದೆ. ಸೂರ್ಯ ಉದಯವಾಗುವ ಮೊದಲೇ ಎದ್ದು ಸ್ನಾನ ಮಾಡಿ ಸೂರ್ಯ ದೇವನಿಗೆ ಶುದ್ಧ ಹಸುವಿನ ತುಪ್ಪದಲ್ಲಿ ದೀಪ ಹಚ್ಚಿ. ಕೇಸರಿ ಅಥವಾ ಅರಿಶಿಣದ ತಿಲಕವನ್ನ ಹಣೆಗೆ ಹಚ್ಚಿಕೊಳ್ಳಿ. ಹಳದಿ ವಸ್ತುವನ್ನ ದಾನ ಮಾಡಿ.