ಕೊಡಗು: 1995ರ ನಂತರದಲ್ಲಿ ಸ್ಥಾಪನೆ ಆಗಿರುವ ಖಾಸಗಿ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಒಲವನ್ನು ಸಿಎಂ ಸಿದ್ದರಾಮಯ್ಯ ತೋರಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಕೊಡಗಿನಲ್ಲಿ ನೆಡೆದ ವಿಧಾನ ಪರಿಷತ್ ಚುನಾವಣೆಯ ಸಭೆಯಲ್ಲಿ ಶಿಕ್ಷಣ ಸಚಿವರಾದ ಶ್ರೀಯುತ ಮಧು ಬಂಗಾರಪ್ಪ ಅವರು ಮಾತನಾಡಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸಂಕಷ್ಟ ಸ್ಥಿತಿ ಇದ್ದು, 1995ರ ನಂತರದಲ್ಲಿ ಸ್ಥಾಪನೆ ಆಗಿರುವ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸಲು ಸರ್ಕಾರ ಬದ್ಧವಾಗಿದ್ದು, ನೀತಿ ಸಂಹಿತೆ ಇರುವ ಕಾರಣ ಮುಂದಿನ ದಿನಗಳಲ್ಲಿ ಗಮನ ಹರಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸೋದಾಗಿ ತಿಳಿಸಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ ಕೆ ಮಂಜುನಾಥ್ ಕುಮಾರ್, ಆಯನೂರು ಮಂಜುನಾಥ್ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ನೌಕರರ ಹಾಗೂ ಆಡಳಿತ ಮಂಡಳಿಯವರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಮಂಜೇಗೌಡರು ಹಾಗೂ ತಂಡದವರು ಸಭೆನಲ್ಲಿ ಭಾಗವಹಿಸಿದ್ದರು.
ನಮ್ಮೆಲ್ಲ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಡಾ.ಕೆ ಕೆ ಮಂಜುನಾಥ್ ರವರ ಜೊತೆಗೆ ಉಳಿದ 4 ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಆಯಾ ಭಾಗದ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಬೆಂಬಲಿಸಬೇಕು ಎಂದರು. ರಾಜ್ಯ ಸಂಘಟನೆಗಳು ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕೆಂದು ಕೇಳಿಕೊಂಡರು.