ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಗೋಪಾ ಪ್ರವಾಸದಲ್ಲಿ ವೇಳೆಯಲ್ಲಿ ಭಾರೀ ಗಲಾಟೆಯೇ ನಡೆದಿದೆ. ನಿರ್ಮಾಪಕ ಎ ಗಣೇಶ್ ಹಾಗೂ ಸತೀಶ್ ನಡುವೆ ಗಲಾಟೆ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ. ರೆಸಾರ್ಟ್ ನಲ್ಲೇ ಇಬ್ಬರು ನಿರ್ಮಾಪಕ ನಡುವೆ ನಡೆದಂತ ಡಿಶ್ಯುಂ ಡಿಶ್ಯುಂನಲ್ಲಿ, ಎ ಗಣೇಶ್ ತಲೆಗೆ ಪೆಟ್ಟು ಬಿದ್ದಿರೋದಾಗಿ ಹೇಳಲಾಗುತ್ತಿದೆ.
ಮೇ.27ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಿರ್ಮಾಪಕರು ಗೋಪಾ ಪ್ರವಾಸಕ್ಕೆ ತೆರಳಿದ್ದರು. ಬಸ್ ನಲ್ಲಿಯೇ ಗಣೇಶ್ ಹಾಗೂ ಮಂಜುನಾಥ್ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ತಾರಕ್ಕೇರಿ ಎ.ಗಣೇಶ್, ಮಂಜುನಾಥ್ ಹಾಗೂ ಸತೀಶ್ ಪರಸ್ಪರ ಡಿಶ್ಯುಂ ಡಿಶ್ಯುಂ ಹಲ್ಲೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ.
ಗೋವಾದ ಹಿಬೀಸ್ ರೆಸಾರ್ಟ್ ನಲ್ಲೇ ಮೂವರು ನಿರ್ಮಾಪಕ ನಡುವೆ ಗಲಾಟೆ ನಡೆದಿದ್ದರಿಂದ, ನಿರ್ಮಾಪಕ ಎ ಗಣೇಶ್ ಅವರು ಈ ಹಲ್ಲೆಯಲ್ಲಿ ತಲೆಗೆ ಪೆಟ್ಟಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
ಸ್ಯಾಂಡಲ್ ವುಡ್ ಮೂವರು ನಿರ್ಮಾಪಕರ ನಡುವೆ ನಡೆದಂತ ಗಲಾಟೆಯ ಬಳಿಕ, ಗೋವಾ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡು ಅಂದೇ ನಿರ್ಮಾಪಕ ಸತೀಶ್ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಒಟ್ಟಾರೆಯಾಗಿ ಕನ್ನಡ ಚಿತ್ರರಂಗ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ನೆಪದಲ್ಲಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಹಾಗೂ ಚಿತ್ರರಂಗದ ಇತರ ಮುಖಂಡರು ಗೋವಾ ಪ್ರವಾಸ ಕೈಗೊಂಡ ಗೋವಾ ಟ್ರಿಪ್ ವೇಳೆಯಲ್ಲಿ ನಿರ್ಮಾಪಕರ ನಡುವೆ ಡಿಶ್ಯುಂ ಡಿಶ್ಯುಂ ಆಗಿದೆ.
BREAKING: ದೆಹಲಿ ಗಲಭೆ ಪ್ರಕರಣ: ‘ಉಮರ್ ಖಾಲಿದ್’ಗೆ ಜಾಮೀನು ನಿರಾಕರಿಸಿದ ಕೋರ್ಟ್ | Delhi Riots conspiracy case