ಬೆಂಗಳೂರು: ಫೇಕ್ ಖಾತೆಗಳ ಮೂಲಕ ಹೆಣ್ಣುಮಕ್ಕಳ ಬಗ್ಗೆ, ಸೆಲೆಬ್ರೆಟಿಗಳ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿ, ಟ್ರೋಲ್ ಮಾಡುತ್ತಿದ್ದಂತ ಟ್ರೋಲಿಗರ ವಿರುದ್ಧ ಬಿಗ್ ಬಾಸ್ ಮಾಜಿ ಸ್ಪರ್ಧಿ ಸುಷ್ಮಾ ವೀರ್ ಸಿಡಿದೆದ್ದಿದ್ದಾರೆ. ತಾನು ಮಾಡದ ಪೋಸ್ಟ್ ಟ್ರೋಲ್ ಮಾಡಿದಂತ ಕಿಡಿಗೇಡಿಗಳ ವಿರುದ್ಧ ಸೈಬರ್ ಠಾಣೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸುಷ್ಮಾ ವೀರ್ ದೂರು ನೀಡಿದ್ದಾರೆ.
ಹೌದು ಬಿಗ್ ಬಾಸ್ ಮಾಜಿ ಸ್ಪರ್ಧಿ ಸುಷ್ಮಾ ವೀರ್ ಟ್ರೋಲಿಗರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ತಾವು ಆಡದ ಮಾತನ್ನು ತಿರುಚಿ ಟ್ರೋಲ್ ಮಾಡಿದ್ದಕ್ಕಾಗಿ ಸೈಬರ್ ಪೊಲೀಸರಿಗೆ, ರಾಜ್ಯ ಮಹಿಳಾ ಆಯೋಗಕ್ಕೆ ಬಿ ಜಯಶ್ರಿ ಪುತ್ರಿ ಸುಷ್ಮಾ ವೀರ್ ದೂರು ನೀಡಿದ್ದಾರೆ.
ಅಂದಹಾಗೇ ಕೆಲ ದಿನಗಳ ಹಿಂದೆ ಯೂಟ್ಯೂಬರ್ ಸಂದರ್ಶನ ಒಂದಕ್ಕೆ ನೀಡಿದ್ದಂತ ಸಂದರ್ಶನದಲ್ಲಿ ಸುಷ್ಮಾ ವೀರ್ ಮಾತನಾಡದ ಮಾತನ್ನು ತಿರುಚಿ ಟ್ರೋಲ್ ಮಾಡಲಾಗಿತ್ತು. ಅವರ ಪೇಜ್ ಗಳ ಲೈಕ್ ಲಾಭಕ್ಕಾಗಿ ಮಾನಹಾನಿ ರೀತಿಯಲ್ಲಿ ತಿರುಚಿ ಟ್ರೋಲ್ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಸೈಬರ್ ಠಾಣೆ, ಮಹಿಳಾ ಆಯೋಗಕ್ಕೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಸುಷ್ಮಾ ವೀರ್ ದೂರು ನೀಡಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
‘ಆದಾಯ ತೆರಿಗೆ ಪಾವತಿ’ದಾರರೇ ಗಮನಿಸಿ: ಮೇ.31ರೊಳೆಗೆ ‘ಪ್ಯಾನ್’ಗೆ ಆಧಾರ್ ಲಿಂಕ್ ಮಾಡದಿದ್ರೇ, ದುಪ್ಪಟ್ಟು TDS ಫಿಕ್ಸ್
BREAKING: ದೆಹಲಿ ಗಲಭೆ ಪ್ರಕರಣ: ‘ಉಮರ್ ಖಾಲಿದ್’ಗೆ ಜಾಮೀನು ನಿರಾಕರಿಸಿದ ಕೋರ್ಟ್ | Delhi Riots conspiracy case