ಮಂಗಳೂರು: ಮುಸಲ್ಮಾನ ಸಮುದಾಯದವರು ನಗರದ ಕಂಕನಾಡಿ ಮಸೀದಿ ಮುಂದಿನ ರಸ್ತೆಯಲ್ಲಿ ನಮಾಜ್ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಅವರು ನಮಾಜ್ ಮಾಡುತ್ತಿದ್ದ ಕಾರಣ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎನ್ನಲಾಗಿದೆ.
ಈ ನಡುವೆ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದ ಕೆಲ ವಾಹನಗಳು ನಮಾಜ್ ಮಾಡುತ್ತಿದ್ದವರನ್ನು ನೋಡಿ ಅಲ್ಲಿಂದ ತಮ್ಮ ವಾಹನವನ್ನು ಯುಟರ್ಟನ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ನಡುವೆ ಸ್ಥಳೀಯ ಜನತೆ ರಸ್ತೆಯ ಮೇಲೆ ನಮಾಜ್ ಮಾಡುವ ಅಧೀಕಾರ ಕೊಟ್ಟವರು ಯಾರು, ಈ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸಿದ್ದಾರೆ.