ಬೆಳಗಾವಿ : ಮನೆ ಮುಂದೆ ಸಂಪ್ ಇರುವ ಪೋಷಕರೇ ಎಚ್ಚರವಾಗಿರಿ, ಮನೆ ಮುಂದೆ ಆಟವಾಡುತ್ತಿದ್ದ ಮಗು ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಆಟವಾಡುತ್ತಿದ್ದಾಗ ಮಗು ನೀರಿನ ಸಂಪ್ ಗೆ ಬಿದ್ದು ಮೃತಪಟ್ಟಿದೆ. ಮಗುವನ್ನು ಕಂಗ್ರಾಳ ಗಲ್ಲಿಯ ಸಾಯೀಶ್ ಸಂದೀಪ್ ಬಡವನಾಚೆ ಎಂದು ಗುರುತಿಸಲಾಗಿದೆ.
ಆಟವಾಡುತ್ತಿದ್ದ ಮಗು ಏಕಾಏಕಿ ಕಾಣದಿದ್ದಾಗ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಬಳಿಕ ಅನುಮಾನಗೊಂಡು ನೀರಿನ ಸಂಪ್ ನೋಡಿದಾಗ ಮಗು ನೀರಿಗೆ ಬಿದ್ದಿರುವುದು ಕಂಡುಬದಿದೆ. ಸಂಪ್ ಗೆ ಬಿದ್ದ ಮಗು ಸಾವನ್ನಪ್ಪಿದೆ.ಬೆಳಗಾವಿ ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.