ನವದೆಹಲಿ: ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹೆಸರಿನ ಬಿಯರ್ ಯುಕೆಯಲ್ಲಿ ವೈರಲ್ ಆಗಿದ್ದು, ಹೆಚ್ಚಿನ ಬೇಡಿಕೆಯಿಂದಾಗಿ ಕಂಪನಿಯು ವೆಬ್ಸೈಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಒಸಾಮಾ ಬಿನ್ ಲಾಗರ್ ಎಂಬ ಹೆಸರಿನ ಬಿಯರ್ ಅನ್ನು ಮಿಚೆಲ್ ಬ್ರೂಯಿಂಗ್ ಕಂಪನಿ ಮಾರಾಟ ಮಾಡುತ್ತದೆ, ಇದು ಕಿಮ್ ಜಾಂಗ್ ಅಲೆ ಮತ್ತು ಪುಟಿನ್ ಪೋರ್ಟರ್ ಎನ್ನುವ ಬಿಯರ್ ಅನ್ನು ಸಹ ಮಾರಾಟ ಮಾಡುತ್ತದೆ. ಲ್ಯೂಕ್ ಮಿಚೆಲ್ ಮತ್ತು ಕ್ಯಾಥರಿನ್ ಮಿಚೆಲ್ ಎಂಬ ದಂಪತಿ ಈ ಬ್ರೇವರಿ ಮತ್ತು ಪಬ್ ಗಳ ಮಾಲೀಕರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಕ್ಯಾಥರೀನ್ ಮಿಚೆಲ್, “ಕಳೆದ ಎರಡು ದಿನಗಳಿಂದ ನಮಗೆ ಪುರುಸೊತ್ತಿಲ್ಲದಷ್ಟು ನೋಟಿಫಿಕೇಶನ್ ಗಳು ಬರುತ್ತಿವೆ. ಇದೊಂಥರಾ ಕ್ರೇಝ್ ಅಂತಲೇ ಅನ್ನಿುತ್ತಿದೆ. ಕಳೆದ 48 ಗಂಟೆಯಿಂದ ಫೋನಿಗೆ ರೆಸ್ಟೇ ಇಲ್ಲ ನೋಡಿ’ ಅಂಥ ಹೇಳುತ್ತಾರೆ.