ಬೀದರ್ : ಗುಜರಾತ್, ದೆಹಲಿಯ ಎರಡು ಕಡೆ ಭೀಕರ ಅಗ್ನಿ ಅವಘಡ ದುರಂತದ ಬೆನ್ನಲ್ಲೆ ರಾಜ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಬೀದರ್ ನಗರದ ಜೆಸ್ಕಾಂ ಕಚೇರಿಯಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ. ಬೀದರ್ ನ ಜ್ಯೋತಿ ನಗರದಲ್ಲಿರುವ ಜೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕಚೇರಿಯ ಪೀಟೋಪಕರಣ ಹಾಗೂ ಟಿಸಿಗಳು ಸುಟ್ಟುಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.