ನವದೆಹಲಿ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ದೆಹಲಿಯ ಎಲ್ಲಾ ಏಳು ಕ್ಷೇತ್ರಗಳು ಸೇರಿದಂತೆ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 58 ಸ್ಥಾನಗಳಲ್ಲಿ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಬಿಹಾರ (8), ಹರ್ಯಾಣ (10), ಜಮ್ಮು ಮತ್ತು ಕಾಶ್ಮೀರ (1), ಜಾರ್ಖಂಡ್ (4), ದೆಹಲಿ (7), ಒಡಿಶಾ (6), ಉತ್ತರ ಪ್ರದೇಶ (14) ಮತ್ತು ಪಶ್ಚಿಮ ಬಂಗಾಳ (8) ರಾಜ್ಯಗಳಲ್ಲಿ ಈ ಹಂತದಲ್ಲಿ ಮತದಾನ ನಡೆಯಲಿದೆ. ಇದಲ್ಲದೆ, 3 ನೇ ಹಂತದಲ್ಲಿ ಮುಂದೂಡಲ್ಪಟ್ಟ ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್-ರಾಜೌರಿ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ. ಇದೇ ವೇಳೆ ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
11 ಕೋಟಿಗೂ ಹೆಚ್ಚು ಮತದಾರರು 889 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದು, ಈ ಹಂತದಲ್ಲಿ ಪ್ರಮುಖ ಹೆಸರುಗಳಲ್ಲಿ ಬಾನ್ಸುರಿ ಸ್ವರಾಜ್, ಮನೋಜ್ ತಿವಾರಿ, ಕನ್ಹಯ್ಯ ಕುಮಾರ್, ಮೇನಕಾ ಗಾಂಧಿ, ಸಂಬಿತ್ ಪಾತ್ರಾ ಮತ್ತು ರಾಜ್ ಬಬ್ಬರ್ ಸೇರಿದ್ದಾರೆ.
6 ನೇ ಹಂತದ ಸೀಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
1. ಬಿಹಾರ (8 ಸ್ಥಾನಗಳು): ವಾಲ್ಮೀಕಿ ನಗರ, ಪಶ್ಚಿಮ ಚಂಪಾರಣ್, ಪೂರ್ವಿ ಚಂಪಾರಣ್, ಶಿಯೋಹರ್, ವೈಶಾಲಿ, ಗೋಪಾಲ್ಗಂಜ್, ಸಿವಾನ್, ಮಹಾರಾಜ್ಗಂಜ್
2. ಹರಿಯಾಣ (10 ಸ್ಥಾನಗಳು): ಅಂಬಾಲಾ, ಕುರುಕ್ಷೇತ್ರ, ಸಿರ್ಸಾ, ಹಿಸಾರ್, ಕರ್ನಾಲ್, ಸೋನಿಪತ್, ರೋಹ್ಟಕ್, ಭಿವಾನಿ-ಮಹೇಂದ್ರಗಢ, ಗುರ್ಗಾಂವ್, ಫರಿದಾಬಾದ್
3. ಜಾರ್ಖಂಡ್ (4 ಸ್ಥಾನಗಳು): ಗಿರಿದಿಹ್, ಧನ್ಬಾದ್, ರಾಂಚಿ, ಜೆಮ್ಶೆಡ್ಪುರ
4. ಒಡಿಶಾ (6 ಸ್ಥಾನಗಳು): ಸಂಬಲ್ಪುರ, ಕಿಯೋಂಜಾರ್, ಧೆಂಕನಲ್, ಕಟಕ್, ಪುರಿ, ಭುವನೇಶ್ವರ
5. ಉತ್ತರ ಪ್ರದೇಶ (14 ಸ್ಥಾನಗಳು): ಸುಲ್ತಾನ್ಪುರ್, ಪ್ರತಾಪ್ಗಢ, ಫುಲ್ಪುರ್, ಅಲಹಾಬಾದ್, ಅಂಬೇಡ್ಕರ್ ನಗರ, ಶ್ರಾವಸ್ತಿ, ಡೊಮಾರಿಯಾಗಂಜ್, ಬಸ್ತಿ, ಸಂತ ಕಬೀರ್ ನಗರ, ಲಾಲ್ಗಂಜ್, ಅಜಂಗಢ, ಜೌನ್ಪುರ್, ಮಚ್ಲಿಶಹರ್, ಭದೋಹಿ
6. ಪಶ್ಚಿಮ ಬಂಗಾಳ (8 ಸ್ಥಾನಗಳು): ತಮ್ಲುಕ್, ಕಾಂತಿ, ಘಟಾಲ್, ಜಾರ್ಗ್ರಾಮ್, ಮೇದಿನಿಪುರ, ಪುರುಲಿಯಾ, ಬಂಕುರಾ, ಬಿಷ್ಣುಪುರ
7. ದೆಹಲಿ (7 ಸ್ಥಾನಗಳು): ಚಾಂದನಿ ಚೌಕ್, ಈಶಾನ್ಯ ದೆಹಲಿ, ಪೂರ್ವ ದೆಹಲಿ, ನವದೆಹಲಿ, ವಾಯುವ್ಯ ದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ
8. ಜಮ್ಮು ಮತ್ತು ಕಾಶ್ಮೀರ (1 ಸ್ಥಾನ): ಅನಂತ್ನಾಗ್-ರಾಜೌರಿ