ಉತ್ತರಾಖಂಡದ ಕೇದಾರನಾಥದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಳು ಮಂದಿಯನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಇದು ಶುಕ್ರವಾರ ಮುಂಜಾನೆ ಶಿರಸಿ ಹೆಲಿಪ್ಯಾಡ್ ನಿಂದ ಕೇದಾರನಾಥಕ್ಕೆ ಹೊರಟಿತ್ತು ಎನ್ನಲಾಗಿದೆ.
ಈ ಘಟನೆಯ ವೀಡಿಯೊದಲ್ಲಿ ಹೆಲಿಕಾಪ್ಟರ್ ಹಿಮಾಲಯದ ದೇವಾಲಯದ ಬಳಿ ಇಳಿಯುವ ಮೊದಲು ಹೆಲಿಪ್ಯಾಡ್ನಿಂದ ಕೆಲವು ಮೀಟರ್ ಎತ್ತರದಲ್ಲಿ ವೃತ್ತಾಕಾರದಲ್ಲಿ ಚಲಿಸುತ್ತಿರುವುದನ್ನು ತೋರಿಸುತ್ತದೆ, ಇದು ನೆಲದ ಮೇಲಿನ ಜನರಿಗೆ ಭೀತಿಯನ್ನುಂಟು ಮಾಡಿದೆ.
ಆದರೆ, ಕಾಪ್ಟರ್‌ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಪ್ರಾಥಮಿಕ ವರದಿಗಳ ಆಧಾರದ ಮೇಲೆ, ರುದ್ರಪ್ರಯಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಗಹರ್ವಾರ್ ಅವರು ಹೆಲಿಕಾಪ್ಟರ್ನ ಹಿಂಭಾಗದ ಮೋಟರ್ನಲ್ಲಿ ದೋಷ ಕಾಣಿಸಿಕೊಂಡಿದೆ, ಇದರಿಂದಾಗಿ ಪೈಲಟ್ ಲ್ಯಾಂಡಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಪೈಲಟ್ ತ್ವರಿತ ನಿರ್ಧಾರವನ್ನು ತೆಗೆದುಕೊಂಡರು, ದೊಡ್ಡ ಅಪಘಾತವನ್ನು ತಪ್ಪಿಸಿದರು ಎಂದು ಗಹರ್ವಾರ್ ಹೇಳಿದರು. ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
STORY | Helicopter carrying pilgrims develops snag, makes emergency landing in #Kedarnath
READ: https://t.co/Mz85s5VsIp
VIDEO:
(Source: Third Party) pic.twitter.com/aeFavSaodA
— Press Trust of India (@PTI_News) May 24, 2024