ಬೆಂಗಳೂರು: ಆನ್ ಲೈನ್ ವಂಚಕರು ಜನರನ್ನು ವಂಚಿಸೋದಕ್ಕೆ ವಿವಿಧ ದಾರಿಗಳನ್ನು ಹಿಡಿಯುತ್ತಿದ್ದಾರೆ. ಈಗ ಹೊಸದೊಂದು ದಾರಿ ಕಂಡುಕೊಂಡಿರುವಂತ ವಂಚಕರು, ನಿಮ್ಮ ಮೊಬೈಲ್ ಗಳಿಗೆ ಮೆಸೇಜ್ ಕಳಿಸ್ತಾ ಇದ್ದಾರೆ. ಒಂದು ವೇಳೆ ನೀವು ಓಪನ್ ಮಾಡಿದ್ದೇ ಆದಲ್ಲಿ, ನಿಮ್ಮ ಬ್ಯಾಂಕ್ ಖಾತೆ ಸೈಬರ್ ವಂಚಕರ ಪಾಲಾಗೇ ಬಿಡುತ್ತೆ. ಅದು ಹೇಗೆ.? ಪೊಲೀಸರ ಎಚ್ಚರಿಕೆ ಏನು ಅಂತ ಮುಂದೆ ಓದಿ.
ಆನ್ ಲೈನ್ ವಂಚನೆ ಬಗ್ಗೆ ಕರ್ನಾಟಕ ಪೊಲೀಸರು ಮಹತ್ವದ ಮಾಹಿತಿಯನ್ನು ಜನರಿಗಾಗಿ ಬಿಡುಗಡೆ ಮಾಡಿದ್ದಾರೆ. ಆ ಪತ್ರಿಕಾ ಪ್ರಕಟಣೆಯಲ್ಲಿ ವಂಚಕರು RAT(Remote access tool) ಗಳ ಸಹಾಯದಿಂದ APK file ಅಥವಾ App ಸಿದ್ಧಪಡಿಸಿ, What’sApp ಅಥವಾ text message ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿಕೊಡುತ್ತಿದ್ದು, ಅದನ್ನು ಓಪನ್ ಮಾಡಿದಲೆ ಸಾರ್ವಜನಿಕರಿಗೆ ಬರುವ ಎಲ್ಲಾ Text message ಗಳು ವಂಚಕರ ಮೊಬೈಲ್ ಗಳಿಗೆ Automatically, Message forwarding ಆಗುತ್ತಿವೆ ಎಂಬ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇನ್ನೂ ಲಿಂಕ್ ಓಪನ್ ಮಾಡಿದ ಬಳಿಕ ವಂಚಕರು ಸುಲಭವಾಗಿ OTP ಪಡೆದುಕೊಂಡು ಸಾರ್ವಜನಿಕರ ಖಾತೆಗಳಿಗೆ Internet mobile banking application ಗಳನ್ನು ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ, ಸಾರ್ವಜನಿಕರ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಿಶೇಷವಾಗಿ ಕೆನರಾ ಬ್ಯಾಂಕಿನ ಗ್ರಾಹಕರಿಗೆ ಈ ರೀತಿಯ ತೊಂದರೆ ಆಗುತ್ತಿರುವುದು ಕಂಡುಬರುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.
ಆದ್ದರಿಂದ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ What’sApp ಅಥವಾ Text message ಮುಖಾಂತರ ಬರುವ APK file ಅಥವಾ App ಗಳ ಲಿಂಕ್ ಗಳನ್ನು ಕಿಕ್ (Click) ಮಾಡದಿರಿ, ಒಂದು ವೇಳೆ ನಿರ್ಲಕ್ಷದಿಂದ ಅಂತಹ ಲಿಂಕ್ ಗಳನ್ನು ಕಿಕ್ ಮಾಡಿದ್ದಲಿ ತಕ್ಷಣ ತಮ್ಮ ಮೊಬೈಲ್ ನ್ನು Switch off ಮಾಡಿಕೊಂಡು ನಿಮ್ಮ ಬ್ಯಾಂಕ್ ಗೆ ಸಂಪರ್ಕಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವುದು, ತಮ್ಮ ಖಾತೆಯಿಂದ ಹಣ ವರ್ಗಾವಣೆಗೊಂಡಿದ್ದಲಿ Cybercrime Helpline 1930 ಗೆ ಕರೆ ಮಾಡಿ ದೂರು ದಾಖಲಿಸಲು ಕೋರಿದ್ದಾರೆ.