ಶಿವಮೊಗ್ಗ : ಸಂತೇಕಡೂರು ಗ್ರಾಮದ 66/11 ಕೆವಿ ವಿ.ವಿ.ಕೇಂದ್ರದ ಎಫ್-2 ಮತ್ತು ಎಫ್-4ರ ಮಾರ್ಗಗಳ ವ್ಯಾಪ್ತಿಯಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಮತ್ತು ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ -25 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರ ವರಗೆ ಸಂತೇಕಡೂರು, ಶ್ರೀರಾಮನಗರ, ರಾಂಪುರ, ಮಳಲಿಕೊಪ್ಪ, ಭಂಡಾರಿಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಮಾಜಿ ಸೈನಿಕರ ವಿವರಗಳ ತಿದ್ದುಪಡಿಗೆ ಅವಕಾಶ
ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪನರ್ವಸತಿ ಇಲಾಖೆಯು ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಬಿತರು ಕುಟುಂಬ ಪಿಂಚಣಿ ಪಡೆಯುವಲ್ಲಿ, ಇತರೆ ದೃಢೀಕರಣ ಪತ್ರಗಳು, ಇನ್ನಿತರೆ ಸೌಲಭ್ಯಗಳನ್ನು ಪಡೆಯುವಲ್ಲಿ ಅಡಚಣೆ ಹಾಗೂ ವಿಳಂಬತೆಯಾಗುತ್ತಿರುವುದರಿಂದ ಸೇನಾ ಸೇವಾ ಪುಸ್ತಕದಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದೆ.
ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಬಿತರು ಸೇನಾ ಸೇವಾ ಪುಸ್ತಕದಲ್ಲಿ ಪತಿ, ಪತ್ನಿ ಹಾಗೂ ಮಕ್ಕಳ ಹೆಸರುಗಳನ್ನು ಆಧಾರ್ ಎಸ್.ಎಸ್.ಎಲ್.ಸಿ ಪಟ್ಟಿಯೊಂದಿಗೆ ಹೊಂದಾಣಿಕೆಯಾಗುವಂತೆ ಸರಿಪಡಿಸಿಕೊಳ್ಳಲು ಕೋರಿದೆ. ಹಾಗೂ ಹಲವು ಹಿರಿಯ ಮಾಜಿ ಸೈನಿಕರುಗಳ ಅತ್ಯಾವಶ್ಯಕ ಮಾಹಿತಿಗಳು ಕಛೇರಿ ದಾಖಲೆಗಳಲ್ಲಿ ಅಪೂರ್ಣವಾಗಿದ್ದು ಸೈನಿಕ ಕಲ್ಯಾಣ ಮತ್ತು ಪನರ್ವಸತಿ ಇಲಾಖೆ ಕಛೇರಿಗೆ ಕಛೇರಿಗೆ ಮೂಲ ದಾಖಲೆಗಳೂಂದಿಗೆ ಭೇಟಿ ನೀಡಿ ಸರಿಪಡಿಸಿಕೋಳ್ಳಲು ಹಾಗೂ ನ್ಯೂನತೆಗಳನ್ನು ಪರಿಶೀಲಿಸಿಕೊಳ್ಳುವಂತೆ ಡಾ. ಸಿ.ಎ ಹಿರೇಮಠ್ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪನರ್ವಸತಿ ಇಲಾಖೆ ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 08182-220925 ಸಂಪರ್ಕಿಸುವುದು.
ಸೊರಬ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಆನ್‍ಲೈನ್ ಅರ್ಜಿ ಆಹ್ವಾನ
ಪ್ರಜ್ವಲ್ ರೇವಣ್ಣಗೆ ಬಿಗ್‌ಶಾಕ್: ಪಾಸ್ ಪೋರ್ಟ್’ ರದ್ದತಿ ಪ್ರಕ್ರಿಯೆ ಆರಂಭ, ಶೀಘ್ರದಲ್ಲಿ ಬಂಧನ!