ದಕ್ಷಿಣ ಕನ್ನಡ: ನಾನು ಪೊಲೀಸರಿಗೆ ಬೈದಿದ್ದು ಯಾವುದೇ ಕಾರ್ಯಕರ್ತರಿಗಾಗಿ, ಅಧಿಕಾರಕ್ಕಾಗಿ ಅಲ್ಲವೇ ಅಲ್ಲ. ಪ್ರಕರಣದಲ್ಲಿ ಇಲ್ಲದೇ ಇದ್ದಂತ ಓರ್ವನನ್ನು ಬಂಧಿಸಿ, ಠಾಣೆಗೆ ಕರೆತಂದಿದ್ದಕ್ಕಾಗಿ ಅಂತ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಸ್ಪಷ್ಟ ಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಾರ್ಡಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಧಿಕಾರಕ್ಕಾಗಿ ಸಿಎಂ ಸಿದ್ಧರಾಮಯ್ಯ ಈ ಹಿಂದೆ ಶಂಕರ್ ಬಿದರಿ ಕಾಲರ್ ಹಿಡಿದಿರಲಿಲ್ವ? ನಾನು ಪೊಲೀಸರಿಗೆ ಬೈದಿದ್ದು ಕಾರ್ಯಕರ್ತರಿಗಾಗಿ, ಅಧಿಕಾರಕ್ಕಾಗಿ ಅಲ್ಲವೇ ಅಲ್ಲ ಅಂದರು.
ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ. ಪೊಲೀಸರ ಮೇಲೆ ಹೆಚ್ಚು ದೌರ್ಜನ್ಯ ಮಾಡಿದ್ದು ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಅಂತವರು ಬಿಜೆಪಿ ನಾಯಕರಿಗೆ ಬುದ್ಧಿ ಹೇಳೋ ಅವಶ್ಯಕತೆಯಿಲ್ಲ ಅಂತ ಕಿಡಿಕಾರಿದರು.
ನಾನು ಬೆಳ್ತಂಗಡಿ ಠಾಣೆಗೆ ಪ್ರಕರಣದಲ್ಲಿ ಇಲ್ಲದೇ ಇದ್ದಂತ ಒಬ್ಬನನ್ನು ಕರೆತಂದಿದ್ದರು. ಇದನ್ನು ನಾನು ಮುಲಾಜಿಲ್ಲದೇ ಖಂಡಿಸಿದ್ದೇನೆ. ನಾನು ಯಾವುದೇ ಕಾರ್ಯಕರ್ತ, ಅಧಿಕಾರಕ್ಕಾಗಿ ಬೈದಿದ್ದಲ್ಲ. ಪ್ರಜ್ವಲ್ ರೇವಣ್ಣ ಕೇಸ್ ಆದಾಗ ಕಾಂಗ್ರೆಸ್ ಪ್ರತಿಭಟನೆ ಮಾಡಲಿಲ್ಲವೇ? ಆಗ ಯಾವ ನ್ಯಾಯ, ಕಾನೂನು ಇತ್ತು.? ಸಿಎಂ ಸಿದ್ಧರಾಮಯ್ಯ ಬೆಳ್ತಂಗಡಿಗೆ ಬಂದ ಮೇಲೆ ನನ್ನ ವಿರುದ್ಧ ಎಫ್ಐಆರ್ ಹಾಕಿದ್ದಾರೆ ಅಂತ ವಾಗ್ಧಾಳಿ ನಡೆಸಿದರು.
BIG NEWS: ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಎಂದ ‘ರಾಹುಲ್ ಗಾಂಧಿ’ ವಿರುದ್ಧ ‘JDS’ ದೂರು
‘ಸೇನೆಗೆ ಅಗ್ನಿವೀರ ಬೇಡ, ನಾವದನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ’ : ರಾಹುಲ್ ಗಾಂಧಿ