ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಜನರಿಗೆ ಸರಬರಾಜು ಮಾಡುವಂತ ಔಷಧಿ ಸರಬರಾಜು ಮಾಡೋದು ಬಿಟ್ಟು, ಪಶುಗಳಿಗೆ ನೀಡುವಂತ ಔಷಧಿ ಸರಬರಾಜು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಏನ್ ಹೇಳಿದ್ರು ಅಂತ ಮುಂದೆ ಓದಿ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಪುಷ್ಕರ್ ಫಾರ್ಮಾ ಲಿಮಿಟೆಡ್ ಕಂಪನಿಯು ಸರಬರಾಜು ಮಾಡಿರುವ ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ದ್ರಾವಣ ಉತ್ಪನ್ನದ ಬಗ್ಗೆ ಸೃಷ್ಟಿಯಾಗಿರುವ ಗೊಂದಲಗಳ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. KSMSCL ಗೋದಾಮುಗಳು ಮತ್ತು ಸಂಸ್ಥೆಗಳಿಂದ ಉತ್ಪನ್ನವನ್ನು ಹಿಂಪಡೆಯಲಾಗುತ್ತಿದೆ. ಔಷಧ ಉತ್ಪನ್ನವನ್ನು ಬದಲಿಸಲು M/S PUSHKAR PARMA Ltd ಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಪುಷ್ಕರ್ ಫಾರ್ಮಾ ಕಂಪನಿಯು ಸರಬರಾಜು ಮಾಡಿರುವ ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ಉತ್ಪನ್ನದಲ್ಲಿ ದೋಷವಿದೆಯಾ ಎಂಬುದರ ಬಗ್ಗೆ ಪರಿಶೀಲಿಸಲು ಸೂಚನೆ ನೀಡಲಾಗಿತ್ತು. ಔಷಧಿ ಪರಿಶೀಲನೆ ವೇಳೆ ಇದು ಪಶುಗಳಿಗೆ ಬಳಸುವ ಔಷಧವಲ್ಲ. ಔಷಧದ ಮೇಲಿನ ಮುದ್ರಣ ದೋಷವಾಗಿದೆ ಎಂದು ತಿಳಿದುಬಂದಿದೆ. ಆದರೂ, ಮುಂಜಾಗೃತ ಕ್ರಮವಾಗಿ ದಾಸ್ತಾನಿನಲ್ಲಿರುವ ಔಷಧಿಗಳನ್ನ ವಾಪಸ್ ಕಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಲೇಬಲ್ ಚೇಂಜ್ ಆಗಿರುವ ಬಗ್ಗೆ ಪುಷ್ಕರ್ ಫಾರ್ಮಾ ಸಂಸ್ಥೆಯು ಈ ಮೊದಲೇ ಮಾಹಿತಿ ನೀಡಿದ್ದು ಆರೋಗ್ಯ ಅಧಿಕಾರಿಗಳು ಕೂಡ ಸೂಕ್ತ ಪರಿಶೀಲನೆ ನಡೆಸಿದ್ದಾರೆ. ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದ ಜನರ ಆರೋಗ್ಯ ವಿಷಯದಲ್ಲಿ ಯಾವುದೇ ಪ್ರಮಾದ ನಡೆಯಲು ನಮ್ಮ ಆರೋಗ್ಯ ಇಲಾಖೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ ಪುಷ್ಕರ್ ಫಾರ್ಮಾ ಲಿಮಿಟೆಡ್ ಕಂಪನಿಯು ಸರಬರಾಜು ಮಾಡಿರುವ ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ ದ್ರಾವಣ ಉತ್ಪನ್ನದ ಬಗ್ಗೆ ಸೃಷ್ಟಿಯಾಗಿರುವ ಗೊಂದಲಗಳ ಬಗ್ಗೆ ಈಗಾಗಲೇ @DHFWKA ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. KSMSCL ಗೋದಾಮುಗಳು ಮತ್ತು ಸಂಸ್ಥೆಗಳಿಂದ ಉತ್ಪನ್ನವನ್ನು ಹಿಂಪಡೆಯಲಾಗುತ್ತಿದೆ. ಔಷಧ…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 21, 2024
ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ಸ್ಪೋಟ ಕೇಸ್: ಹುಬ್ಬಳ್ಳಿ-ಧಾರವಾಡದ 3 ಕಡೆ ‘NIA ದಾಳಿ’
ರೈತರೇ ನಿಮ್ಮ ಖಾತೆಗೆ ‘ಬೆಳೆ ಪರಿಹಾರ’ದ ಹಣ ಬಂದಿಲ್ವ?: ಈ ಕೆಲಸ ತಪ್ಪದೇ ಮಾಡಿ, ಜಮಾ