ಬೆಂಗಳೂರು : ಪೆನ್ ಡ್ರೈವ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಯನ್ನು ಅಪರಾಧಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿಯನ್ನು ಅಪರಾಧಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅಪರಾಧಿ ಅಂತ ಎಲ್ಲಿ ಸಾಬೀತಾಗಿದೆ. ಪ್ರಜ್ವಲ್ ರೇವಣ್ಣರನ್ನು ಆರೋಪ ಬಂದ ಕೂಡಲೇ ಪಾರ್ಟಿಯಿಂದ ಅಮಾನತು ಮಾಡಿದ್ದೇವೆ. ನೈತಿಕತೆ ಮೇಲೆ ಅಮಾನತು ಮಾಡಿದ್ದೇವೆ ಎಂದಿದ್ದಾರೆ.
ನಾವು ನಿಮ್ಮ ರೀತಿ ಭಂಡತನ ಮಾಡಿಲ್ಲ. ನಿಮ್ಮ ಮಗ ಅಪ್ಪ ನಾನು ಕೊಟ್ಟಿದ್ದು ಐದು ಹೆಸರು ಅಂತಾನಲ್ಲ ಆ ಹೆಸರು ಎಲ್ಲಿಂದ ಬಂತು ಅಂತ ಹೇಳ್ತೀರಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟವರ ವಿರುದ್ಧ ಕ್ರಮಕ್ಕೆ ಕಾನೂನು ಹೋರಾಟ ಮಾಡಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ವಕೀಲರ ಜೊತೆಗೆ ಚರ್ಚಿಸಿದ್ದು, ಕೋರ್ಟ್ ಗೆ ಕ್ರಮ ವಹಿಸುವಂತೆ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪೆನ್ ಡ್ರೈವ್ ಮೂಲಕ ವಿಡಿಯೋ ಹರಿಬಿಟ್ಟಿದ್ದಕ್ಕೆ ಮಹಿಳೆಯರ ಮಾನಹಾನಿಯಾಗಿದೆ. ಹೀಗಾಗಿ ಇಂತಹ ವಿಡಿಯೋಗಳನ್ನು ಹರಿಬಿಟ್ಟವರ ವಿರುದ್ದ ಕೋರ್ಟ್ ಮೂಲಕ ಕಠಿಣ ಕ್ರಮಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ.