ನವದೆಹಲಿ : ಎಎಪಿ 2014 ರಿಂದ 2022 ರವರೆಗೆ 7.08 ಕೋಟಿ ರೂ.ಗಳನ್ನ ವಿದೇಶಿ ನಿಧಿಯಾಗಿ ಸ್ವೀಕರಿಸಿದೆ ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA), ಜನ ಪ್ರಾತಿನಿಧ್ಯ ಕಾಯ್ದೆ (RPA) ಮತ್ತು ಭಾರತೀಯ ದಂಡ ಸಂಹಿತೆ (IPC) ಅನ್ನು ಉಲ್ಲಂಘಿಸಿದೆ ಎಂದು ಜಾರಿ ನಿರ್ದೇಶನಾಲಯ (ED) ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಇಡಿಯ ಆರೋಪಗಳನ್ನ ತಳ್ಳಿಹಾಕಿದ್ದು, ಇದು ಪಕ್ಷವನ್ನ ದೂಷಿಸುವ ರಾಜಕೀಯ ಪಿತೂರಿ ಎಂದು ಪ್ರತಿಪಾದಿಸಿದೆ.
ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಒಮಾನ್ ಸೇರಿದಂತೆ ದೇಶಗಳಲ್ಲಿ ಎಎಪಿ ಅನೇಕ ದಾನಿಗಳಿಂದ ಹಣವನ್ನು ಸ್ವೀಕರಿಸಿದೆ ಎಂದು ಇಡಿ ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ. ಮೇ 25ರಂದು ದೆಹಲಿಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಕಡತ ಬಂದಿದೆ.
ಎಎಪಿ ಮತ್ತು ಅದರ ನಾಯಕರು ವಿದೇಶಿ ನಿಧಿ ಸಂಗ್ರಹಿಸುವಲ್ಲಿ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ ಎಂದು ಇಡಿ ತನ್ನ ತನಿಖೆಯಲ್ಲಿ ಹೇಳಿಕೊಂಡಿದೆ ಮತ್ತು ಎಎಪಿ ಶಾಸಕ ದುರ್ಗೇಶ್ ಪಾಠಕ್ ಸೇರಿದಂತೆ ಕೆಲವರು 2016 ರಲ್ಲಿ ಕೆನಡಾದಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮದ ಸಮಯದಲ್ಲಿ ಸಂಗ್ರಹಿಸಿದ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.
‘ಹೊಸ ಕ್ರಿಮಿನಲ್ ಕಾನೂನು’ಗಳ ವಿರುದ್ಧದ ಅರ್ಜಿ ಸ್ವೀಕಾರಕ್ಕೆ ಸುಪ್ರೀಂಕೋರ್ಟ್ ನಿರಾಕರಣೆ
BREAKING: ಅಂಜಲಿ ಹತ್ಯೆ ಕೇಸ್: ಇಂದು ಸಂಜೆ ಅಥವಾ ನಾಳೆ ‘CID’ಗೆ ಹಸ್ತಾಂತರ- ಡಾ.ಜಿ ಪರಮೇಶ್ವರ್
ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಿ : ಗೃಹ ಸಚಿವ ಜಿ. ಪರಮೇಶ್ವರ್ ಬಳಿ ನೇಹಾ ಪೋಷಕರ ಮನವಿ