ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. ತನ್ನ ಕಳೆದ ಹಣಕಾಸು ವರ್ಷದ ಮತ್ತು ಮಾರ್ಚ್ 31, 2024ಕ್ಕೆ ಅಂತ್ಯಗೊಂಡ 4ನೇ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಬ್ಯಾಂಕ್ ಮಾರ್ಚ್ 31ಕ್ಕೆ ಕೊನೆಯಾದ ತ್ರೈಮಾಸಿಕ ಅವಧಿಯಲ್ಲಿ 6,681 ಕೋಟಿ ರೂ. ಸಾಲವನ್ನು ವಿತರಿಸಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಲ ವಿತರಣೆಯಲ್ಲಿ ಶೇ.11ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಅದೇ ರೀತಿ, 2023-2024ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ಒಟ್ಟಾರೆ 23,389 ಕೋಟಿ ರೂ. ಸಾಲ ವಿತರಿಸಿದ್ದು, ಕಳೆದ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ.17ರಷ್ಟು ಹೆಚ್ಚಳವಾಗಿದೆ.
ಮಾ.31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕೈಗೆಟಕುವ ದರದಲ್ಲಿ ಒಟ್ಟು730 ಕೋಟಿ ರೂ.ಗಳ ಗೃಹ ಸಾಲ ನೀಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ.66ರಷ್ಟು ಹೆಚ್ಚು ಸಾಲ ವಿತರಣೆಯಾಗಿದೆ. 2023-2024ನೇ ಹಣಕಾಸು ವರ್ಷದಲ್ಲಿ 2,284 ಕೋಟಿ ರೂ. ಗೃಹ ಸಾಲ ವಿತರಿಸಲಾಗಿದ್ದು, ಕಳೆದ ವಿತ್ತ ವರ್ಷಕ್ಕೆ ಹೋಲಿಸಿದರೆ ಶೇ.64ರಷ್ಟು ಹೆಚ್ಚಳ ಕಂಡಿದೆ.
23-24ರ ಒಟ್ಟಾರೆ ಸಾಲದ ಮೊತ್ತವು ಶೇ.24ರಷ್ಟು ಏರಿಕೆಯಾಗಿ, 29,780 ಕೋಟಿ ರೂ.ಗಳಾಗಿವೆ. ಹಿಂದಿನ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಮಾರ್ಚ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ ಒಟ್ಟಾರೆ ಸಾಲದ ಪ್ರಮಾಣವು ಶೇ.7ರಷ್ಟು ಏರಿಕೆಯಾಗಿದೆ.
ಇನ್ನು, 2024ರ ಮಾರ್ಚ್ ನಲ್ಲಿ ಸೆಕ್ಯೂರ್ಡ್ ಬುಕ್ ಶೇ.30.2ರಷ್ಟಿದ್ದರೆ, 2023ರ ಡಿಸೆಂಬರ್ ನಲ್ಲಿ ಇದು ಶೇ.28.4ರಷ್ಟಿತ್ತು.
ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಸಾಲ ವಸೂಲಾತಿ ಪ್ರಕ್ರಿಯೆಯೂ ಉತ್ತಮವಾಗಿ ಮುಂದುವರಿದಿದ್ದು, ಶೇ.99ರಷ್ಟು ದಕ್ಷತೆಯನ್ನು ಕಾಯ್ದುಕೊಳ್ಳಲಾಗಿದೆ. ಎನ್ ಡಿಎ ಸಂಗ್ರಹ ಶೇ.100ರಷ್ಟಾಗಿದೆ. ಮರುಪಾವತಿಗೆ ಬಾಕಿಯಿರುವ ಸಾಲವು(ಪೋರ್ಟ್ ಫೋಲಿಯೋ ಅಟ್ ರಿಸ್ಕ್) ಶೇ.3.5ರಷ್ಟಿದ್ದು, ಒಟ್ಟು ಅನುತ್ಪಾದಕ ಆಸ್ತಿ (ಜಿಎನ್ ಪಿಎ) ಸ್ಥಿರವಾಗಿದ್ದು, ಶೇ.2.1 ರಷ್ಟಿದೆ. 2023ರ ಡಿಸೆಂಬರ್ ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಇದು ಶೇ.2.1 ರಷ್ಟಿತ್ತು. ಮಾರ್ಚ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ ಎನ್ಎನ್ ಪಿಎ(ನಿವ್ವಳ ಅನುತ್ಪಾದಕ ಆಸ್ತಿ) ಕೇವಲ ಶೇ.0.3ರಲ್ಲಿ ಮುಂದುವರಿದಿದೆ. ಈ ಅವಧಿಯಲ್ಲಿ ಒಟ್ಟು 65 ಕೋಟಿ ರೂ.ಗಳ ಸಾಲವನ್ನು ರೈಟ್ ಆಫ್ ಮಾಡಲಾಗಿದೆ.
ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ 31,462 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.6 ಹಾಗೂ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.23ರಷ್ಟು ಹೆಚ್ಚಳವಾಗಿದೆ. ಸಿಎಎಸ್ಎ(ಚಾಲ್ತಿ ಖಾತೆ ಉಳಿತಾಯ ಖಾತೆ) ಮೊತ್ತವು ಕಳೆದ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ.24ರಷ್ಟು ಮತ್ತು ಕಳೆದ ತ್ರೈಮಾಸಿಕಕ್ಕೆ ಹೋಲಿಸದರೆ ಶೇ.10ರಷ್ಟು ಏರಿಕೆಯಾಗಿದ್ದು, ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು 8,335 ಕೋಟಿ ರೂ. ಸಂಗ್ರಹವಾಗಿದೆ. ಸಿಎಎಸ್ಎ ಅನುಪಾತವು ಈ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಶೇ.26.5ರಷ್ಟಿದ್ದರೆ, ಅದರ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಶೇ.25.5ರಷ್ಟಿತ್ತು. ಚಿಲ್ಲರೆ ಅವಧಿ ಠೇವಣಿ (ರಿಟೇಲ್ ಟಿಡಿ) ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರ ಹಣಕಾಸು ವರ್ಷದಲ್ಲಿ ಶೇ.36ರಷ್ಟು ಮತ್ತು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಶೇ.7ರಷ್ಟು ಬೆಳವಣಿಗೆ ದಾಖಲಿಸಿದೆ.
ನಿವ್ವಳ ಬಡ್ಡಿ ಆದಾಯ(ಎನ್ಐಐ)ವು 4ನೇ ತ್ರೈಮಾಸಿಕದಲ್ಲಿ 934 ಕೋಟಿ ರೂ. ಆಗಿದ್ದು, ಕಳೆದ ತ್ರೈಮಾಸಿಕಕ್ಕಿಂತ ಶೇ.27ರಷ್ಟು ಹೆಚ್ಚಳವಾಗಿದೆ. 2023-24ರ ವಿತ್ತ ವರ್ಷದಲ್ಲಿ ಇದು 3,409 ಕೋಟಿ ರೂ.ಗಳಾಗಿದ್ದು ಕಳೆದ ವಿತ್ತ ವರ್ಷಕ್ಕಿಂತ ಶೇ.26ರಷ್ಟು ಬೆಳವಣಿಗೆ ಸಾಧಿಸಿದೆ. ಇದೇ ವೇಳೆ, ಬ್ಯಾಂಕಿನ ನಿವ್ವಳ ಬಡ್ಡಿ ಅಂತರ(ಎನ್ಐಎಂ)ವು 4ನೇ ತ್ರೈಮಾಸಿಕದಲ್ಲಿ ಶೇ.9.4ರಷ್ಟು, ಇಡೀ ವಿತ್ತ ವರ್ಷದಲ್ಲಿ ಶೇ.9.1ರಷ್ಟು ಇತ್ತು. ವೆಚ್ಚದಿಂದ ಆದಾಯ ಅನುಪಾತವು 4ನೇ ತ್ರೈಮಾಸಿಕದಲ್ಲಿ ಶೇ.55.7 ಆಗಿದ್ದು, 2024ನೇ ಹಣಕಾಸು ವರ್ಷದಲ್ಲಿ ಶೇ.54.3ರಷ್ಟಾಗಿದೆ.
ಮಾರ್ಚ್ ಗೆ ಅಂತ್ಯಗೊಂಡ 4ನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ಕಾರ್ಯಾಚರಣೆಯಿಂದ ಬಂದ ಆದಾಯ(ಪಿಪಿಒಪಿ) 519 ಕೋಟಿ ರೂ.ಗಳಾಗಿದ್ದು, ಕಳೆದ ತ್ರೈಮಾಸಿಕಕ್ಕಿಂತ ಶೇ.26ರಷ್ಟು ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ, 24ನೇ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆಯಲ್ಲಿ ಬಂದ ಆದಾಯವು 1,917 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.29ರ ಏರಿಕೆ ಕಂಡಿದೆ. ತೆರಿಗೆ ನಂತರದ ಲಾಭ (ಪಿಎಟಿ)ವು 4ನೇ ತ್ರೈಮಾಸಿಕದಲ್ಲಿ 330 ಕೋಟಿ ರೂ.ಗಳಾಗಿದ್ದು (3ನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.7ರಷ್ಟು ಹೆಚ್ಚಳ), 24ನೇ ಹಣಕಾಸು ವರ್ಷದಲ್ಲಿ 1,281 ಕೋಟಿ ರೂ.ಗಳಷ್ಟಾಗಿದೆ (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17 ಹೆಚ್ಚಳ).
ಷೇರುದಾರರ ಅನುಮತಿಗೆ ಒಳಪಟ್ಟು, ಬ್ಯಾಂಕಿನ ಆಡಳಿತ ಮಂಡಳಿಯು ಪ್ರತಿ ಷೇರಿಗೆ 1.5 ರೂ.ಗಳಂತೆ ಅಂತಿಮ ಲಾಭಾಂಶ ನೀಡಲು ಶಿಫಾರಸು ಮಾಡಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಹಣಾಧಿಕಾರಿ ಶ್ರೀ. ಇಟ್ಟಿರಾ ಡೇವಿಸ್ ರವರು ಮಾತನಾಡಿ, 2024ರ ಹಣಕಾಸು ವರ್ಷದ 4ನೇ ತ್ರೈಮಾಸಿಕವು ಮತ್ತೊಂದು ಯಶಸ್ವಿ ವಿತ್ತ ವರ್ಷಕ್ಕೆ ಉತ್ತಮ ಮುನ್ನುಡಿ ಬರೆದಿದೆ. ಈ ಅವಧಿಯಲ್ಲಿ ನಮಗೆ ಗುಣಮಟ್ಟದ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗಿದೆ. ನಾವು ಬ್ಯಾಂಕ್ ಮತ್ತು ಅದರ ಹೋಲ್ಡಿಂಗ್ ಕಂಪನಿ ನಡುವಿನ ವಿಲೀನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ನಮ್ಮ ಸೆಕ್ಯೂರ್ಡ್ ಬುಕ್ (ಸುರಕ್ಷಿತ ಪುಸ್ತಕ) ಈ ತ್ರೈಮಾಸಿಕದಲ್ಲಿ 177 ಮೂಲಾಂಕ (ಬಿಪಿಎಸ್) ನಷ್ಟು ಸುಧಾರಣೆ ಕಂಡು, 30.2%ಕ್ಕೆ ತಲುಪಿದೆ. 4ನೇ ತ್ರೈಮಾಸಿಕದಲ್ಲಿ ₹ 6,681 ಕೋಟಿ ರೂ. ಮತ್ತು ವಾರ್ಷಿಕವಾಗಿ ₹ 23,389 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಕೈಗೆಟುಕುವ ಗೃಹ (ಸೂಕ್ಷ್ಮ ಅಡಮಾನಗಳು ಸೇರಿದಂತೆ) ಸಾಲ ವಿತರಣೆಯಲ್ಲೂ ಪ್ರಗತಿ ಸಾಧಿಸಲಾಗಿದ್ದು, 4ನೇ ತ್ರೈಮಾಸಿಕದಲ್ಲಿ ₹730 ಕೋಟಿ ಮತ್ತು ವಾರ್ಷಿಕ ₹ 2,284 ಕೋಟಿ ಸಾಲ ವಿತರಿಸಲಾಗಿದೆ. ಈ ಮೂಲಕ 2023-24ರ ಹಣಕಾಸು ವರ್ಷದಲ್ಲಿ ಗೃಹ ಸಾಲ ವಿತರಣೆಯಲ್ಲಿ ಶೇ.45ರ ಬೆಳವಣಿಗೆ ಸಾಧಿಸಲಾಗಿದೆ. ಈ ವೇಗವು ಮುಂದಿನ ವರ್ಷವೂ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು. ಹೆಚ್ಚುವರಿಯಾಗಿ, ನಾವು ಪರಿಷ್ಕೃತ ಎಲ್ಒಎಸ್ ಅನ್ನು ಪರಿಚಯಿಸುವ ಅಂತಿಮ ಹಂತದಲ್ಲಿರುತ್ತೇವೆ, ಒಮ್ಮೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಿದರೆ ಅದು ವ್ಯವಹಾರ ದಕ್ಷತೆಯನ್ನು ಮತ್ತಷ್ಟು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ ಪೂರ್ವ-ಅರ್ಹ ಟಾಪ್-ಅಪ್ ಸಾಲಗಳನ್ನು ನಮ್ಮ ಉತ್ಪನ್ನ ಸೂಟ್ ಗೆ ಸೇರಿಸಲಾಗಿದೆ, ಇದು ನಮ್ಮ ಅಸ್ತಿತ್ವದಲ್ಲಿರುವ ಕೈಗೆಟುಕುವ ವಸತಿ ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದು ನುಡಿದರು.
ನಮ್ಮ ದೊಡ್ಡ ಗ್ರಾಹಕರ ನೆಲೆ ಹಾಗೂ ಅಧಿಕ ಶಾಖೆಗಳ ಉಪಸ್ಥಿತಿಯೊಂದಿಗೆ ಹೊಸ ಮಾದರಿಯ ವ್ಯಾಪಾರ ವಿಭಾಗಗಳಾದ ಗೋಲ್ಡ್ ಲೋನ್ಸ್ ಮತ್ತು ವೆಹಿಕಲ್ ಫೈನಾನ್ಸ್ ವ್ಯವಹಾರವನ್ನು ವೃದ್ಧಿಸುತ್ತಿದ್ದೇವೆ. ನಮ್ಮ ಎಂಎಸ್ಎಂಇ ವರ್ಟಿಕಲ್ ಎಲ್ಎಪಿ ಉತ್ಪನ್ನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನಾವು ನಮ್ಮ ಉತ್ಪನ್ನ ಸೂಟ್ ಅನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಎಂಎಸ್ಎಂಇ ಪುಸ್ತಕವನ್ನು ಬೆಳೆಸುವ ಗಮನದೊಂದಿಗೆ ಹೊಸ ಫಿನ್ಟೆಕ್ ಪಾಲುದಾರರನ್ನು ಜತೆಗೆ ಸೇರಿಸಿಕೊಂಡಿದ್ದೇವೆ. ಇದು ಸುರಕ್ಷಿತ ಕೊಡುಗೆಯನ್ನು ಹೆಚ್ಚಿಸಲು ಮತ್ತಷ್ಟು ಸಹಾಯ ಮಾಡುತ್ತದೆ. ಠೇವಣಿ ವಿಚಾರದಲ್ಲಿ ಹೇಳುವುದಾದರೆ ನಮ್ಮ ಗ್ರಾಹಕ ಸೇವೆಯನ್ನು ಸುಧಾರಿಸುವ ಮೂಲಕ ಮತ್ತು ವರ್ಧಿತ ಮೌಲ್ಯವರ್ಧಿತ ಉತ್ಪನ್ನಗಳನ್ನು ನೀಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಡಿಜಿಟಲ್ ಎಸ್ಎ ಮತ್ತು ಡಿಜಿಟಲ್ ಎಫ್ ಡಿಯಂತಹ ನಮ್ಮ ಡಿಜಿಟಲ್ ಉತ್ಪನ್ನಗಳ ಮೂಲಕ ಗ್ರಾಹಕರಿಗೆ ತಡೆರಹಿತ ಡಿಜಿಟಲ್ ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ. ನಮ್ಮ ಚಿಲ್ಲರೆ ಠೇವಣಿಗಳ ಬೆಳವಣಿಗೆಯು ನಮ್ಮ ಬೃಹತ್ ಠೇವಣಿಗಳ ಬೆಳವಣಿಗೆಯನ್ನು ಮೀರಿಸುತ್ತಿದೆ, ಇದು ಆರೋಗ್ಯಕರ ಠೇವಣಿ ಹೆಚ್ಚಳವನ್ನು ಸೂಚಿಸುತ್ತದೆ. ಸಿಎಎಸ್ಎ ಬುಕ್ ಪ್ರತಿ ತ್ರೈಮಾಸಿಕದಲ್ಲೂ 10% ಬೆಳೆದಿದೆ. 4ನೇ ತ್ರೈಮಾಸಿಕದಲ್ಲಿ ಸುಮಾರು 778 ಕೋಟಿ ರೂ.ಗಳ ಸಿಎಎಸ್ಎಯನ್ನು ಸಂಗ್ರಹಿಸಲಾಗಿದೆ. ಸಿಎಎಸ್ಎ ಅನುಪಾತವು ಕಳೆದ ತ್ರೈಮಾಸಿಕದಲ್ಲಿ 25.5% ರಿಂದ ಈ ತ್ರೈಮಾಸಿಕದಲ್ಲಿ 26.5% ಕ್ಕೆ ಸುಧಾರಿಸಿದೆ. ಇದು ಈ ಬಾರಿ ನಮ್ಮ ಸಿಒಎಫ್ ನಲ್ಲಿ ಸುಧಾರಣೆಗೆ ಕಾರಣವಾಗಿದೆ. ಈ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಅಂತರ(ಎನ್ಐಎಂ) 9.4% ರಷ್ಟಿತ್ತು ಎಂದಿದ್ದಾರೆ.
ನಮ್ಮ ನಿವ್ವಳ ಬಡ್ಡಿ ಆದಾಯ(ಎನ್ಐಐ) ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.26ರಷ್ಟು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.9ರಷ್ಟು ಪ್ರಗತಿ ಸಾಧಿಸಿದ ಕಾರಣದಿಂದ, ಬ್ಯಾಂಕಿನ ಕಾರ್ಯಾಚರಣೆಯಿಂದ ಬಂದ ಆದಾಯ(ಪಿಪಿಒಪಿ)ವು 519 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಮಾರ್ಚ್ ನಲ್ಲಿ ಶೇ.99ರಷ್ಟು ಸಂಗ್ರಹವಾಗಿದ್ದು, ಉತ್ತಮ ಸಾಧನೆ ಸಾಧ್ಯವಾಗಿದೆ. ಇಲ್ಲಿಂದ ಸಾಲದ ವೆಚ್ಚವೂ ಸಾಮಾನ್ಯ ಸ್ಥಿತಿಗೆ ಬರುವುದನ್ನು ನಾವು ಕಾಣಬಹುದು. ಪಿಎಟಿ 4ನೇ ತ್ರೈಮಾಸಿಕ ಮತ್ತು ಇಡೀ ಹಣಕಾಸು ವರ್ಷದಲ್ಲಿ ಕ್ರಮವಾಗಿ ₹ 330 ಕೋಟಿ ಮತ್ತು ₹ 1,281 ಕೋಟಿ ಆಗಿದ್ದು, 7% ಮತ್ತು 17% ಏರಿಕೆಯಾಗಿದೆ. ಕಳೆದ 2 ಸತತ ಹಣಕಾಸು ವರ್ಷಗಳಲ್ಲಿ ನಾವು ಬಲವಾದ ಆರ್ಥಿಕ ಕಾರ್ಯಕ್ಷಮತೆ ತೋರಿದ್ದೇವೆ. 2024ನೇ ಹಣಕಾಸು ವರ್ಷದಲ್ಲಿ ನಾವು ಕ್ರಮವಾಗಿ 3.5% ಮತ್ತು 26.1% ಆರ್ ಒಎ /ಆರ್ ಒಇ ಸಾಧಿಸಿದ್ದೇವೆ ಎಂದು ಹೇಳಿದರು.
ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಮೂಲದ ನಾಲ್ವರು ಐಸಿಸ್ ಉಗ್ರರ ಬಂಧನ | ISIS Terrorists
BREAKING : ʻಹೊಸ ಕ್ರಿಮಿನಲ್ ಕಾನೂನುʼಗಳ ವಿರುದ್ಧದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್