ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ಹಾಗೂ ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶದ ನಂತ್ರ, ಸಾಮಾನ್ಯ ಪ್ರವೇಶ ಪರೀಕ್ಷೆ( CET-2024) ಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟ ಪಡಿಸಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಪೋಸ್ಟ್ ಮಾಡಿದ್ದು, ದ್ವಿತೀಯ ಪಿಯುಸಿ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರವೇ ಕೆಸಿಇಟಿ-24ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದಿದೆ.
ಇದಲ್ಲದೆ, ಪ್ರಕಟಣೆಯ ದಿನಾಂಕಕ್ಕೆ ಮುಂಚಿತವಾಗಿ ಫಲಿತಾಂಶಗಳನ್ನು ಪ್ರಕಟಿಸುವ ದಿನಾಂಕವನ್ನು ಕೆಇಎ ಅಧಿಕೃತವಾಗಿ ತಿಳಿಸುತ್ತದೆ. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದಂತೆ ಕೆಇಎ ಅಧಿಕೃತ ಜಾಲತಾಣ www.kea.kar.nic.in ಗೆ ಭೇಟಿ ನೀಡಿ ಪರಿಶೀಲಿಸಬಹುದು ಎಂದು ಹೇಳಿದೆ.
The results of KCET-24 can be published only after the announcement of the 2nd PUC 2nd exam and Agriculture Practical Test results. Further, KEA will officially notify the date on which results will be published, prior to the announcement date.@CMofKarnataka @drmcsudhakar
— KEA (@KEA_karnataka) May 20, 2024
ಸಿಎಂ ಸಿದ್ಧರಾಮಯ್ಯ ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾ?: ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ
BREAKING : ʻಹೊಸ ಕ್ರಿಮಿನಲ್ ಕಾನೂನುʼಗಳ ವಿರುದ್ಧದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್