ನವದೆಹಲಿ: ಮಾನ್ಸೂನ್ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ನಿಕೋಬಾರ್ ದ್ವೀಪಗಳನ್ನು ಸಮೀಪಿಸುತ್ತಿದೆ, ದೇಶದ ದಕ್ಷಿಣ ತುದಿಯ ಪ್ರದೇಶವಾಗಿರುವ ನಿಕೋಬಾರ್ ದ್ವೀಪಗಳ ಮೇಲೆ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಸಾಪ್ತಾಹಿಕ ಬುಲೆಟಿನ್ ಪ್ರಕಾರ, ದಕ್ಷಿಣ ಅಂಡಮಾನ್ ಸಮುದ್ರ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಮುಂದುವರೆದಿದೆ. ಈ ವರ್ಷ ಮಾಡಿಕೆಗಿಂತ ಹೆಚ್ಚಿನ ಮಳೆ ಆಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭಾರತ ಭಾರೀ ಮಳೆಗೆ ಸಾಕ್ಷಿಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಇತ್ತೀಚಿನ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಐಎಂಡಿ ವಾಯುವ್ಯ ಭಾರತದಾದ್ಯಂತ ಕನಿಷ್ಠ ಮೇ 23 ರವರೆಗೆ ತೀವ್ರ ಶಾಖಕ್ಕಾಗಿ ರೆಡ್ ಅಲರ್ಟ್ ನೀಡಿದೆ. ತೀವ್ರ ಶಾಖ-ಸಂಬಂಧಿತ ತುರ್ತುಸ್ಥಿತಿಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲು ಸ್ಥಳೀಯ ಏಜೆನ್ಸಿಗಳಿಗೆ ಸಾಕಷ್ಟು ತ್ವರಿತವಾಗಿರಲು ಸೂಚಿಸಲಾಗಿದೆ.
“ಮೇ 23 ರವರೆಗೆ ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿಯ ಅನೇಕ ಭಾಗಗಳಲ್ಲಿ ಶಾಖ ತರಂಗದಿಂದ ತೀವ್ರ ಶಾಖ ತರಂಗ ಪರಿಸ್ಥಿತಿಗಳವರೆಗೆ ಇರುವ ಸಾಧ್ಯತೆಯಿದೆ. ಪಶ್ಚಿಮ ರಾಜಸ್ಥಾನ; 22 ಮತ್ತು 23 ರಂದು ಪೂರ್ವ ರಾಜಸ್ಥಾನ; ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮೇ 21 ರವರೆಗೆ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಮೇ 20 ರವರೆಗೆ ” ಎಂದು ಬುಲೆಟಿನ್ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ನಿಕೋಬಾರ್ ದ್ವೀಪಗಳಲ್ಲಿ ಮೋಡ ಕವಿದ ಹೆಚ್ಚಳ ಮತ್ತು ವ್ಯಾಪಕ ಮಳೆ ನೈಋತ್ಯ ಮಾನ್ಸೂನ್ ಅಂಡಮಾನ್ಗೆ ಆಗಮಿಸಲಿದೆ ಎಂಬುದರ ಸ್ಪಷ್ಟ ಸೂಚನೆಗಳಾಗಿವೆ ಎಂದು ಐಎಂಡಿ ತನ್ನ ಬುಲೆಟಿನ್ನಲ್ಲಿ ತಿಳಿಸಿದೆ.