ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಪಡೆದಿದ್ದಾರೆ. ಹಾಗಾದ್ರೇ ಅರೆಸ್ಟ್ ವಾರೆಂಟ್ ಪಡೆದ ತಕ್ಷಣ ವಿದೇಶದಲ್ಲಿರೋ ಅವರನ್ನು ಬಂಧಿಸಬಹುದಾ.? ಆ ಬಗ್ಗೆ ಮುಂದೆ ಓದಿ.
ವಿದೇಶದಲ್ಲಿ ತಲೆಮರೆಸಿಕೊಂಡು ಕಣ್ಣಾಮುಚ್ಚಾಲೆ ಆಟ ಆಡ್ತಿರೋ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಏಪ್ರಿಲ್.26ರಿಂದ ನಾಪತ್ತೆಯಾಗಿರುವಂತ ಅವರನ್ನು ಕೋರ್ಟ್ ಜಾರಿಗೊಳಿಸಿರೋ ಅರೆಸ್ಟ್ ವಾರೆಂಟ್ ನಿಂದ ವಿದೇಶದಲ್ಲಿ ಬಂಧಿಸೋದಕ್ಕೆ ಸಾಧ್ಯವಿಲ್ಲ.
ಕೋರ್ಟ್ ಜಾರಿಗೊಳಿಸಿರುವಂತ ಅರೆಸ್ಟ್ ವಾರೆಂಟ್ ಕೇವಲ ಭಾರತಕ್ಕೆ ಸಂಸದ ಪ್ರಜ್ವಲ್ ರೇವಣ್ಣ ವಾಪಾಸ್ ಆದಾಗ ಮಾತ್ರವೇ ಬಂಧಿಸೋದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಇದರ ಹೊರತಾಗಿ ವಿದೇಶಕ್ಕೆ ಎಸ್ಐಟಿ ಅಧಿಕಾರಿಗಳೇ ತೆರಳಿ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸೋದಕ್ಕೆ ಸಾಧ್ಯವಿಲ್ಲ.
ಇನ್ನೂ ಅರೆಸ್ಟ್ ವಾರೆಂಟ್ ಆದೇಶದಿಂದಲೂ ಏಕಾಏಕಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸೋದಕ್ಕೆ ಸಾಧ್ಯವಿಲ್ಲ. ಯಾಕೆಂದ್ರೆ ರೆಡ್ ಕಾರ್ನರ್ ನೋಟಿಸ್ ಹೊರಡಿಸೋದಕ್ಕಿಂತ ಮೊದಲು ಕೋರ್ಟ್ ಗೆ ಪ್ರಜ್ವಲ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಬೇಕಿದೆ. ಈ ಬಳಿಕವೇ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸೋದಕ್ಕೆ ಸಾಧ್ಯವಿದೆ.
ಬೆಂಗಳೂರಿನ ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ.22ರ ಬೆಳಿಗ್ಗೆ 6ರಿಂದ 23ರ ಸಂಜೆ 6ರವರೆಗೆ ‘ಮದ್ಯ ಮಾರಾಟ’ ನಿಷೇಧ
BREAKING : ವಿಜಯಪುರದಲ್ಲಿ ಯುವಕನ ಭೀಕರ ಹತ್ಯೆ : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ