ರಾಮನಗರ : ಕ್ಯಾನ್ಸರ್ ರೋಗಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕ್ಯಾನ್ಸರ್ ನಂತಹ ಮಹಾಮಾರಿ ಕಾಯಿಲೆಗಳಿಗೆ ಹೊಸ ಔಷಧಿ ಬಿಡುಡೆಯಾಗಿದೆ.
ಹೌದು, ಸಚಿವ ರಾಮಲಿಂಗ ರೆಡ್ಡಿ ಅವರು ನಗರದ ಕೃಷ್ಣಸ್ಮತಿ ಕಲ್ಯಾಣ ಮಂಟಪದಲ್ಲಿಶನಿವಾರ ಆಯೋಜಿಸಿದ್ದ ನಿವೃತ್ತ ಔಷಧ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಪತ್ತೆಹಚ್ಚಿರುವ ಕ್ಯಾನ್ಸರ್ ಕಾಯಿಲೆ ನಿಯಂತ್ರಣಾ ಔಷಧ ಸಿಂಕ್ಯಾನ್ ಅನ್ನು ಬಿಡುಗಡೆಗೊಳಿಸಿದ್ದಾರೆ.
ಸಿಂಕ್ಯಾನ್ ಔಷಧ ಬಿಡುಗಡೆಯು ಕ್ಯಾನರ್ಸ್ ರೋಗಿಗಳಿಗೆ ವರದಾನವಾಗಲಿದೆ. ಕ್ಯಾನ್ಸರ್ ನಿಯಂತ್ರಣಕ್ಕಾಗಿ ಹೊಸ ವಿಧಾನದ ಮೂಲಕ ಹೊಸ ಔಷಧ ಪತ್ತೆ ಹಚ್ಚಲಾಗುತ್ತಿರುವುದು ಮಹಾಮಾರಿ ನಿಯಂತ್ರಣಕ್ಕೆ ಆಶಾದಾಯಕ ಬೆಳವಣಿಗೆ. ಜತೆಗೆ, ಉತ್ತಮ ಗುಣಮಟ್ಟದ ಔಷಧಧಿವನ್ನು ಕಡಿಮೆ ಬೆಲೆಗೆ ನೀಡುತ್ತಿರುವುದು ಬಡವರಿಗೆ ವರದಾನ ಎಂದು ಹೇಳಿದರು.
ಸಿಂಕ್ಯಾನ್ ಔಷಧಿಯನ್ನು ಕ್ರಿಮಿಯೋಥೆರಪಿ ಹಾಗೂ ರೆಡಿಯೋಥೆರಪಿ ಆದ ನಂತರ ಉಪಯೋಗಿಸಬೇಕಾಗಿದೆ. ಇದು ಕ್ಯಾನ್ಸರ್ ಗಡ್ಡೆಗಳಿಂದಾಗಿ ಉಂಟಾಗುವ ನೋವನ್ನು ನಿವಾರಿಸುವುದರ ಜತೆಗೆ, ವಾಂತಿ ಮತ್ತು ಹಸಿವೆ ಇಲ್ಲದಿರುವುದನ್ನು ತಡೆಗಟ್ಟುತ್ತದೆ. ರೋಗಿಗಳಲ್ಲಿಶಕ್ತಿ ವರ್ಧನೆಯನ್ನು ಮಾಡುತ್ತದೆ. ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕ್ಯಾನ್ಸರ್ ಹರಡುವಿಕೆ ತಡೆಗಟ್ಟುತ್ತದೆ. ಅಲೋಪತಿ ಔಷಧಿಯ ಜತೆಗೆ ಈ ಔಷಧಿಯನ್ನು ಸೇವಿಸಿದಾಗ ರೋಗಿ ಬೇಗನೆ ಗುಣಮುಕ್ತನಾಗಲು ಸಹಕಾರಿಯಾಗುತ್ತದೆ.