ಬೆಂಗಳೂರು : ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪದ ಕುರಿತಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ತಕರಾರು ಇಲ್ಲ. ಈ ಪ್ರಕರಣದಲ್ಲಿ ಸಾಕಷ್ಟು ಜನರು ಇನ್ವಾಲ್ ಆಗಿದ್ದಾರೆ. ಅವರೆಲ್ಲಾ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಕರಣದ ಅಪಾಯದಲ್ಲಿ ಸಿಲುಕಿರುವ ಸಂತ್ರಸ್ತೆಯರಿಗೆ ಪರಿಹಾರ ಕೊಡಬೇಕು. ಇದೆಲ್ಲಾ ಕುಮಾರಸ್ವಾಮಿ ಅವರು ಬಿಡಿಸಿ ಬಿಡಿಸಿ ಹೇಳುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಜ್ವಲ್ ರೇವಣ್ಣ ಅವರು ದುಬೈನಿಂದ ರೈಲಿನ ಮೂಲಕ ಲಂಡನ್ ಗೆ ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದ್ದು, ಪ್ರಜ್ವಲ್ ಜೊತೆಗೆ ಬೆಂಗಳೂರಿನ ಒಬ್ಬ ಸ್ನೇಹಿತ ಹಾಗೂ ದುಬೈನ ಒಬ್ಬ ಸ್ನೇಹಿತ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.