ಬೆಂಗಳೂರು: ಹಾಸನದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ವೈರಲ್ ಕೇಸ್ ಗೆ ಬಿಗ್ ಟ್ವಿಸ್ಟನ್ನು ಎಸ್ಐಟಿ ಅಧಿಕಾರಿಗಳ ವಶದಲ್ಲಿರುವಂತ ವಕೀಲ ದೇವರಾಜೇಗೌಡ ನೀಡಿದ್ದಾರೆ. ಅದೇ ಅಶ್ಲೀಲ ವೀಡಿಯೋ ವೈರಲ್ ಕೇಸ್ ಹಿಂದೆ ಇರೋದೇ ಡಿಕೆ ಶಿವಕುಮಾರ್. ಈ ವೀಡಿಯೋ ವೈರಲ್ ಮಾಡೋದಕ್ಕಾಗಿ ನನಗೆ 100 ಕೋಟಿ ಆಫರ್ ನೀಡಿದ್ರು. 5 ಕೋಟಿ ಅಡ್ವಾನ್ ಕೂಡ ಕೊಡೋದಕ್ಕೆ ಬಂದಿದ್ರು ಅಂತ ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಕೋರ್ಟ್ ಗೆ ಹಾಜರಾದಂತ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ವೈರಲ್ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ. ಮೋದಿ, ಬಿಜೆಪಿ, ಹೆಚ್ ಡಿ ಕುಮಾರಸ್ವಾಮಿಗೆ ಕೆಟ್ಟ ಹೆಸರು ತರೋದಕ್ಕೆ ನನಗೆ 100 ಕೋಟಿ ಆಫರ್ ನೀಡಿದ್ರು ಅಂತ ಗಂಭೀರ ಆರೋಪ ಮಾಡಿದ್ದಾರೆ.
ಡಿಕೆಶಿ ನನಗೆ ಕರೆದು ದೊಡ್ಡ ಮಟ್ಟದ ಆಫರ್ ನೀಡಿದ್ರು. ಹೆಚ್ ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಹಂಚಿದ್ದಾರೆ ಅಂತ ಹೇಳೋದಕ್ಕೆ ನನಗೆ ಡಿ.ಕೆ ಶಿವಕುಮಾರ್ ಹೇಳಿದ್ರು ಅಂತ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ನನ್ನ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ಹಾಕಿಸಿದ್ರು. ಆದ್ರೇ ಅದರಲ್ಲೂ ಸಾಕ್ಷ್ಯ ಸಿಗಲಿಲ್ಲ. ನಂತ್ರ ರೇಪ್ ಕೇಸ್ ಹಾಕಿಸಿದ್ರು. ಅದರಲ್ಲೂ ಸಾಕ್ಷ್ಯ ಸಿಗಲಿಲ್ಲ. ಈಗ ಪೆನ್ ಡ್ರೈವ್ ಕೇಸ್ ನಲ್ಲಿ ಲಾಕ್ ಮಾಡಿಸಿದ್ದಾರೆ. ಇದೆಲ್ಲರ ಹಿಂದೆ ಡಿ.ಕೆ ಶಿವಕುಮಾರ್ ಕೈವಾಡವಿದೆ ಎಂಬುದಾಗಿ ಆರೋಪಿಸಿದರು.
ನಾನು ಕೂಡ ಕಾನೂನು ಹೋರಾಟ ಮಾಡುತ್ತೇನೆ. ಡಿಕೆ ಶಿವಕುಮಾರ್ ಜೈಲಿಗೆ ಕಳಿಸದೇ ಬಿಡೋದಿಲ್ಲ ಎಂಬುದಾಗಿ ಎಸ್ಐಟಿ ಅಧಿಕಾರಿಗಳ ವಶದಲ್ಲಿರುವಂತ ವಕೀಲ ದೇವರಾಜೇಗೌಡ ಕಿಡಿಕಾರಿದ್ದಾರೆ.
ಅಶ್ಲೀಲ ವೀಡಿಯೋ ವೈರಲ್ ಮಾಡೋದಕ್ಕೆ ಬೌರಿಂಕ್ ಕ್ಲಬ್ ನ ರೂಂ ನಂಬರ್ 110ರಲ್ಲಿ ಇದ್ದಂತ ನನಗೆ ದೊಡ್ಡ ಮಟ್ಟದ ಆಫರ್ ಎನ್ನುವಂತೆ 100 ಕೋಟಿ ಆಫರ್ ನೀಡಿದ್ರು. ಅದರಲ್ಲಿ ಮುಂಗಡವಾಗಿ 5 ಕೋಟಿ ಅಡ್ವಾನ್ಸ್ ಕೂಡ ಕೊಡೋದಕ್ಕೆ ಡಿಕೆ ಶಿವಕುಮಾರ್ ಕಳಿಸಿದ್ರು ಎಂಬುದಾಗಿ ಸ್ಪೋಟಕ ಬಾಂಬ್ ಸಿಡಿಸಿದರು.
ಹಾಸನ ಪೆನ್ ಡ್ರೈವ್ ವೀಡಿಯೋ ವೈರಲ್ ಮಾಡೋ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ನಾಲ್ವರು ಸಚಿವರ ನೇತೃತ್ವದಲ್ಲಿ ಟೀಂ ರೆಡಿ ಮಾಡಿದ್ರು. ಅವರೆಂದ್ರೆ ಸಚಿವ ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಮತ್ತೊಬ್ಬ ಸಚಿವರನ್ನು ನೇಮಕ ಮಾಡಿದ್ರು ಎಂಬುದಾಗಿ ಆರೋಪಿಸಿದರು.