ದಕ್ಷಿಣ ಕನ್ನಡ: ಜಿಲ್ಲೆಯ ಹೆಸರಾಂತ ಸ್ವ-ಉದ್ಯೋಗ ಸಂಸ್ಥೆ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ವಿವಿಧ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಉಚಿತ ಸ್ವ ಉದ್ಯೋಗ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದಿದೆ.
ಈ ಉಚಿತ ತರಬೇತಿಗೆ ಅರ್ಜಿ ಆಹ್ವಾನ
- ಕಂಪ್ಯೂಟರ್ ಡಿಟಿಪಿ- ದಿನಾಂಕ 27-05-2024 ರಿಂದ 10-07-2024ರವರೆಗೆ 45 ದಿನಗಳು
- ಮಹಿಳೆಯರಿಗೆ ವಸ್ತ್ರ ವಿನ್ಯಾಸ ( ಟೈಲರಿಂಗ್)- ದಿನಾಂಕ 30-05-2024ರಿಂದ 28-06-2024ರವರೆಗೆ 30 ದಿನಗಳು.
- ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ – ದಿನಾಂಕ 11-06-2024ರಿಂದ 10-07-2024ರವರೆಗೆ 30 ದಿನಗಳು.
- ಕಂಪ್ಯೂಟರ್ ಟ್ಯಾಲಿ ( ಅಕೌಂಟಿಂಗ್) – ದಿನಾಂಕ 11-07-2024ರಿಂದ 09-08-2024ರವರೆಗೆ 30 ದಿನಗಳು.
ಊಟ ಮತ್ತು ವಸತಿ ಸಂಪೂರ್ಣ ಉಚಿತ
ಈ ಮೇಲ್ಕಂಡ ತರಬೇತಿಗಳು ಉಚಿತವಾಗಿವೆ. ಈ ತರಬೇತಿಗೆ ಆಯ್ಕೆಯಾದಂತ ಅರ್ಹರಿಗೆ, ತರಬೇತಿಯ ಸಂದರ್ಭದಲ್ಲಿ ಊಟ ಮತ್ತು ವಸತಿ ಉಚಿತವಾಗಿರುತ್ತದೆ.
ವಯೋಮಿತಿ
ಈ ಸ್ವ ಉದ್ಯೋಗ ತರಬೇತಿಗೆ 18 ರಿಂದ 45 ವರ್ಷಗಳ ಒಳಗಿನ ವಯೋಮಾನದವರಿಗೆ ಅರ್ಜಿಯನ್ನು ಸಲ್ಲಿಸಬಹುದು. ಕನ್ನಡ ಓದಲು, ಬರೆಯಲು ಬರುವುದು ಕಡ್ಡಾಯವಾಗಿದೆ.
ಇಲ್ಲಿ ಅರ್ಜಿ ಸಲ್ಲಿಸಿ
ಸ್ವ ಉದ್ಯೋಗ ತರಬೇತಿ ನಿರೀಕ್ಷೆಯಲ್ಲಿರುವಂತ ಅರ್ಹರು ರುಡ್ ಸೆಟ್ ಸಂಸ್ಥೆಯ ಇ-ಮೇಲ್ ಆದಂತ ujirerudseti@gmail.com ಗೆ ಸ್ವ ವಿವರದ ಅರ್ಜಿಯನ್ನು ಸಲ್ಲಿಸಬಹುದು.
ನಿಮಗೆ ವಾಟ್ಸ್ ಆಪ್ ಮೂಲಕವೂ ಅರ್ಜಿ ಸಲ್ಲಿಸೋದಕ್ಕೆ ಅವಕಾಶವಿದೆ. ನಿಮ್ಮ ಅರ್ಜಿ ವಾಟ್ಸ್ ಆಪ್ ಮಾಡಬಹುದಾದ ಸಂಖ್ಯೆ 6364561982 ಆಗಿದೆ.
ನೀವು ಪತ್ರದ ಮೂಲಕ ಅರ್ಜಿ ಸಲ್ಲಿಸೋದಾದರೇ, ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ಇಲ್ಲಿಗೆ ಕಳುಹಿಸಿ.
ಹೆಚ್ಚಿನ ಮಾಹಿತಿಗಾಗಿ 08256-236404, 9591044014, 9448348569, 9980885900ಗೆ ಕರೆ ಮಾಡಿ ಪಡೆಯಬಹುದಾಗಿದೆ.
BBMP ಕಂದಾಯ ಇಲಾಖೆಯ ಅಧಿಕಾರಿಗಳು ‘ಡಿಸಿಎಂ ಡಿಕೆಶಿ ಸೇಲ್ಸ್ ಮನ್’ಗಳಾಗಿ ಸೇವೆ- ಬಿಜೆಪಿ ಪ್ರಕಾಶ್ ಕಿಡಿ
BIG NEWS: ಮುಂದಿನ ವರ್ಷದಿಂದ ‘SSLC ಗ್ರೇಸ್ ಮಾರ್ಕ್ಸ್’ ರದ್ದತಿಗೆ ‘ಸಿಎಂ ಸಿದ್ಧರಾಮಯ್ಯ’ ಆದೇಶ