ಬೆಂಗಳೂರು: ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡ ಮಲ್ಲೇಶ್ವರಂನಲ್ಲಿರುವಂತ ಮಂತ್ರಿಮಾಲ್ ಗೆ ಬೀಗ ಜಡಿಯಲಾಗಿದೆ. ಈ ಬಗ್ಗೆ ಕಿಡಿಕಾರಿರುವಂತ ಬಿಜೆಪಿ ವಕ್ತಾರ ಪ್ರಕಾಶ್ ಅವರು, BBMP ಕಂದಾಯ ಇಲಾಖೆಯ ಅಧಿಕಾರಿಗಳು ಉಪಮುಖ್ಯಮಂತ್ರಿಗಳ ಮನದಾಸೆಯನ್ನು ನೆರವೇರಿಸಿ ಲೂಲು ಮಾಲ್ ಸೇಲ್ಸ್ ಮನ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಡಿ.ಕೆ.ಶಿವಕುಮಾರ್ ಗ್ಲೋಬಲ್ ಮಾಲ್ ವರ್ಸಸ್ ಮಂತ್ರಿ ಮಾಲ್ ಲುಲು ಮಾಲ್ ಎಂದೂ ಕರೆಯುವ ಡಿಕೆಶಿ ಮಾಲ್ ಓಕಳೀಪುರದ ಬಳಿ ಉದ್ಘಾಟನೆಯಾದ ತರುವಾಯ ಕಿಮೀ ದೂರದಲ್ಲಿರುವ ಮಂತ್ರಿ ಮಾಲ್ ಗೆ ಗ್ರಹಚಾರ ಕೆಟ್ಟಿತು. ಮಂತ್ರಿ ಮಾಲ್ ಕಂಪನಿಯು ನಾನಾ ಆರ್ಥಿಕ ಸಂಕಟಕ್ಕೆ ಸಿಲುಕಿಕೊಂಡು ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಪರದಾಡ ತೊಡಗಿತು ಎಂದಿದ್ದಾರೆ.
ಲೂಲು ಮಾಲ್ ಬರುವ ಮೊದಲು ಕೂಡಾ ಆಸ್ತಿ ತೆರಿಗೆ ನೀಡಲು ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿತ್ತು. ಆದರೆ ಆಗ ಡಿಕೆಶಿ ಒಡತನದ ಮಾಲ್ ತೆರದಿರಲಿಲ್ಲ ಹೀಗಾಗಿ ಬಿಬಿಎಂಪಿಗೆ ಅದೊಂದು ಬಾಗಿಲು ಮುಚ್ಚಿಸುವಷ್ಟು ಅಪರಾಧವೆನಿಸಲಿಲ್ಲ. ಕಳೆದ ಆರೇಳು ತಿಂಗಳಲ್ಲಿ ಮಂತ್ರಿ ಮಾಲ್ ಗೆ BBMP ಐದು ಬಾರಿ ಬೀಗ ಜಡಿದಿದ್ದಾರೆ. ಮೊನ್ನೆ ಅಕ್ಷಯ ತೃತೀಯ ಮುನ್ನಾದಿನ ಮಂತ್ರಿ ಮಾಲ್ ಗೆ ಬೀಗ ಜಡಿದರು. ಮೂರು ದಿನಗಳ ರಜಾದಿನದ ವ್ಯಾಪಾರದ ಕತೆ ಮುಗಿಸಿ ಬಿಟ್ಟರು ಎಂಬುದಾಗಿ ಹೇಳಿದ್ದಾರೆ.
ಉಪ ಮುಖ್ಯಮಂತ್ರಿಗಳು KPCC ಅಧ್ಯಕ್ಷರು ಆರ್ಥಿಕವಾಗಿಯೂ ತೋಳ್ಬಲದಲ್ಲಿಯೂ ಪ್ರಬಲವಾಗಿರುವ ಡಿಕೆಶಿ ಮಾಲ್ ಗೆ ಸಮೀಪ ಮತ್ತೊಂದು ಮಾಲ್ ಇರುವುದಾದರು ಹೇಗೆ? ಅವರ ಸೇವೆಯೇ ತಮ್ಮ ಜೀವನದ ಪರಮ ಗುರಿ ಎಂದು ಭಾವಿಸಿ BBMP ಕಂದಾಯ ಇಲಾಖೆಯ ಅಧಿಕಾರಿಗಳು ಉಪಮುಖ್ಯಮಂತ್ರಿಗಳ ಮನದಾಸೆಯನ್ನು ನೆರವೇರಿಸಿ ಲೂಲು ಮಾಲ್ ಸೇಲ್ಸ್ ಮನ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದ್ದಾರೆ.
ತನ್ನ ಮಾಲ್ ಗೆ ಪ್ರತಿಸ್ಪರ್ಧಿಯೇ ಇರಬಾರದು ಎಂದು ಯಾವ ಮಟ್ಟಕ್ಕಾದರೂ ಹೋಗಲು ಸಿದ್ದವಿರುವ ವ್ಯಕ್ತಿಯು ರಾಜಕೀಯದಲ್ಲಿ ಇನ್ನೇನು ಮಾಡಬಹುದು ಎಂಬುದು ಊಹೆಗೂ ನಿಲುಕದೆ ದ್ವೇಷ ಮತ್ತು ಪ್ರತಿಷ್ಠೆಗಾಗಿ ಮತ್ತೊಬ್ಬರನ್ನು ಹಾಳುಮಾಡಲು ಸಮಯಕ್ಕೆ ಸರಿಯಾಗಿ ಅವರ ರಹಸ್ಯಗಳು ಹೊರ ಬರುತ್ತದೆ ಎಂದಿದ್ದಾರೆ.
ಮೊದಲೇ ತಿಳಿದಿದ್ದರೂ ಅದನ್ನು ತಡೆದು ಮಹಿಳೆಯರಿಗೆ ನ್ಯಾಯ ಕೊಡಿಸಲು ಕ್ರಮ ತೆಗೆದುಕೊಂಡರೆ ಏನೂ ಲಾಭವಿಲ್ಲ ಎಂದು ಗೊತ್ತಿರುವ ಬುದ್ದಿವಂತ ರಾಜಕಾರಣಿ. ಅವರೇ ಲೆಕ್ಕವಿಲ್ಲ ಇನ್ನೂ ಮಂತ್ರಿ ಮಾಲ್ ಯಾವ ಲೆಕ್ಕ ನಮ್ಮ ಡಿಕೆಶಿಗೆ. ಅಷ್ಚಲ್ಲದೆ ಬಂಡೆ ಎನ್ನುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
https://x.com/sprakaashbjp/status/1791376278958072126
BIG NEWS: ಮುಂದಿನ ವರ್ಷದಿಂದ ‘SSLC ಗ್ರೇಸ್ ಮಾರ್ಕ್ಸ್’ ರದ್ದತಿಗೆ ‘ಸಿಎಂ ಸಿದ್ಧರಾಮಯ್ಯ’ ಆದೇಶ
‘ಟ್ವಿಟರ್’ ಈಗ ಅಧಿಕೃತವಾಗಿ ‘X.com’: ಸಂಪೂರ್ಣ ‘ಡೊಮೇನ್’ ಪರಿವರ್ತನೆ- ಎಲೋನ್ ಮಸ್ಕ್ ಘೋಷಣೆ