ಬೆಳಗಾವಿ: ರೈಲಿನಲ್ಲಿ ಟಿಸಿಯೊಬ್ಬರು ಟಿಕೆಟ್ ತೋರಿಸು ಎಂದಿದ್ದಕ್ಕೆ ಮುಸುಕುಧಾರಿ ಸೇರಿದಂತೆ ನಾಲ್ವರಿಂದ ಚಾಕುವಿನಿಂದ ರೈಲ್ವೆ ಅಟೆಂಡರ್ ಒಬ್ಬರ ಮೇಲೆ ಇರಿದ ಪರಿಣಾಮ, ತೀವ್ರ ರಕ್ತಸ್ತ್ರಾವದಿಂದ ಸಾವನ್ನಪ್ಪಿರೋ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾದ ಬಳಿಯಲ್ಲಿ ಚಾಲುಕ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಸಿ ಪ್ರಯಾಣಿಕರ ಟಿಕೆಟ್ ಚೆಕ್ ಮಾಡಿದ್ದಾರೆ. ಈ ವೇಳೆಯಲ್ಲಿ ಮುಸುಕುಧಾರಿ ಸೇರಿದಂತೆ ನಾಲ್ವರನ್ನು ಟಿಕೆಟ್ ಎಲ್ಲಿ ಅಂತ ಕೇಳಿದ್ದಾರೆ. ಅದಕ್ಕೆ ಸಿಟ್ಟಿಗೆದ್ದಂತ ನಾಲ್ವರಿಂದ ಟಿಸಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆಯಲ್ಲಿ ರಕ್ಷಣೆಗಾಗಿ ಕೋಚ್ ಅಟೆಂಡರ್ ಧಾವಿಸಿದ್ದಾರೆ.
ಈ ಸಂದರ್ಭದಲ್ಲಿ ಮುಸುಕುಧಾರಿಯೊಬ್ಬ ಚಾಕುವಿನಿಂದ ಕೋಚ್ ಅಡೆಂಡರ್ ಮೇಲೆ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ತೀವ್ರವಾಗಿ ರಕ್ತಸ್ತ್ರಾವದೊಂದಿಗೆ ಚಿಕಿತ್ಸೆ ಫಲಿಸದೇ ಕೋಚ್ ಅಟೆಂಡರ್ ದೇವಋಷಿ ವರ್ಮ(23) ಎಂಬಾತ ಸಾವನ್ನಪ್ಪಿದ್ದಾರೆ.
ಈ ಚಾಕು ಇರಿತದಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪಾಂಡಿಚೇರಿ ಯಿಂದ ಮುಂಬಯಿ ಮಾರ್ಗವಾಗಿ ಚಲಿಸುತ್ತಿದ್ದ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನ ಎಸ್ 8 ಬೋಗಿಯಲ್ಲಿ ಈ ಘಟನೆ ನಡೆದಿದೆ.
ರಜೆಯಲ್ಲಿ ಮಕ್ಕಳ ಸುರಕ್ಷತೆಗೆ ಗಮನ ನೀಡಿ: ಪಾಲಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ