ಬೆಂಗಳೂರು: ನೈರುತ್ಯ ರೈಲ್ವೆಯಿಂದ ವಿವಿಧ ಕಾರಣಗಳಿಂದಾಗಿ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೈಲುಗಳ ಸಂಚಾರ ಭಾಗಶಃ ರದ್ದು
- ರತ್ಲಾಮ್ ವಿಭಾಗದ ರಾವು ಮತ್ತು ಡಾ. ಅಂಬೇಡ್ಕರ್ ನಗರ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ಕೈಗೊಳ್ಳುವುದರಿಂದ ಈ ಕೆಳಗಿನ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಪಶ್ಚಿಮ ರೈಲ್ವೆ ವಲಯವು ಸೂಚಿಸಿದೆ. ಅವುಗಳ ವಿವರ ಈ ಕೆಳಗಿನಂತಿವೆ:
- ಮೇ 21 ಮತ್ತು 28 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 19302 ಯಶವಂತಪುರ-ಡಾ. ಅಂಬೇಡ್ಕರ್ ನಗರ ವೀಕ್ಲಿ ಎಕ್ಸ್ ಪ್ರೆಸ್ ರೈಲು ಇಂದೋರ್-ಡಾ.ಅಂಬೇಡ್ಕರ್ ನಗರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಡಾ.ಅಂಬೇಡ್ಕರ್ ನಗರದ ಬದಲು ಇಂದೋರ್ ಜಂಕ್ಷನ್ ನಲ್ಲಿ ಕೊನೆಗೊಳ್ಳುತ್ತದೆ.
- ಮೇ 19 ಮತ್ತು 26 ರಂದು ರೈಲು ಸಂಖ್ಯೆ 19301 ಡಾ.ಅಂಬೇಡ್ಕರ್ ನಗರ-ಯಶವಂತಪುರ ವೀಕ್ಲಿ ಎಕ್ಸ್ ಪ್ರೆಸ್ ರೈಲು ಡಾ. ಅಂಬೇಡ್ಕರ್ ನಗರ ನಿಲ್ದಾಣದ ಬದಲು ಇಂದೋರ್ ನಿಲ್ದಾಣದಿಂದ ಪ್ರಾರಂಭವಾಲಿದೆ. ಡಾ.ಅಂಬೇಡ್ಕರ್ ನಗರ ಮತ್ತು ಇಂದೋರ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದುಗೊಂಡಿದೆ.
- ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿ ಅಗತ್ಯ ಸುರಕ್ಷತಾ ನಿರ್ವಹಣೆ ಮತ್ತು ವಿವಿಧ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲು ಮಧ್ಯೆ ರೈಲ್ವೆಯು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ:-
- ಮೇ 17 ರಿಂದ 30 ರವರೆಗೆ ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 11140 ಹೊಸಪೇಟೆ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ ಡೈಲಿ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು ಮುಂಬೈನ ಸಿಎಸ್ಎಂಟಿ ನಿಲ್ದಾಣದ ಬದಲು ದಾದರ್ ನಿಲ್ದಾಣದಲ್ಲಿ ತನ್ನ ಸೇವೆ ಕೊನೆಗೊಳ್ಳಲಿದೆ.
- ಮೇ 31 ಮತ್ತು ಜೂನ್ 1 ರಂದು ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 11140 ಹೊಸಪೇಟೆ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ ಡೈಲಿ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು ಮುಂಬೈನ ಸಿಎಸ್ಎಂಟಿ ನಿಲ್ದಾಣದ ಬದಲು ಪುಣೆಯಲ್ಲಿ ತನ್ನ ಸೇವೆ ಕೊನೆಗೊಳ್ಳಲಿದೆ.
- ಮೇ 31 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 11302 ಕೆಎಸ್ಆರ್ ಬೆಂಗಳೂರು-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ ಉದ್ಯಾನ್ ಡೈಲಿ ಎಕ್ಸ್ ಪ್ರೆಸ್ ರೈಲು ಮುಂಬೈನ ಸಿಎಸ್ಎಂಟಿ ನಿಲ್ದಾಣದ ಬದಲು ಪುಣೆಯಲ್ಲಿ ತನ್ನ ಸೇವೆ ಕೊನೆಗೊಳ್ಳಲಿದೆ.
- ಜೂನ್ 1 ಮತ್ತು 2 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 11301 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ-ಕೆಎಸ್ಆರ್ ಬೆಂಗಳೂರು ಉದ್ಯಾನ್ ಡೈಲಿ ಎಕ್ಸ್ ಪ್ರೆಸ್ ರೈಲು ಸಿಎಸ್ಎಂಟಿ, ಮುಂಬೈ-ಪುಣೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಪಡಿಸಲಾಗಿದೆ.
- ಜೂನ್ 1 ರಂದು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈಯಿಂದ ಹೊರಡುವ ರೈಲು ಸಂಖ್ಯೆ 11139 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ-ಹೊಸಪೇಟೆ ಡೈಲಿ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು ಸಿಎಸ್ಎಂಟಿ, ಮುಂಬೈ-ಪುಣೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಪಡಿಸಲಾಗಿದೆ.
ರೈತರ ಸಾಲಕ್ಕೆ ‘ಬರ ಪರಿಹಾರ ಹಣ’ ಜಮೆ: ‘ಬ್ಯಾಂಕ್’ಗಳ ವಿರುದ್ಧ ‘HDK ಕಿಡಿ’