ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರ ಬಂದ ಬಳಿಕ, ಈಗ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವಂತ ಲೈಂಗಿಕ ದೌರ್ಜನ್ಯ ಆರೋಪದ ಕೇಸ್ ಎದುರಿಸುತ್ತಿದ್ದಾರೆ. ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಅಂತಿಮವಾಗಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಈಗ ಕೋರ್ಟ್ ಕಸ್ಟಡಿಗೆ ನೀಡಿದ್ದು, ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿದೆ.
ಇಂದು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ಪ್ರಕರಣದಲ್ಲಿ ಜಾಮೀನು ನೀಡದಂತೆ ಎಸ್ಐಟಿ ಪರ ಎಸ್ ಪಿಪಿ ಆಕ್ಷೇಪಿಸಿದರು.
ಎಸ್ಐಟಿ ಎಸ್ ಪಿಪಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಇಂದು ಬೆಳಿಗ್ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೆರೆಂಡರ್ ಆಗಿದ್ದಾರೆ. ಒಮ್ಮೆ ಸೆರೆಂಡರ್ ಆದ ಮೇಲೆ ಕಸ್ಟಡಿಗೆ ಪಡೆಯಬೇಕು. ರಾಜಕಾರಣಿಯಾದ ಮಾತ್ರಕ್ಕೆ ಸೆರೆಂಡರ್ ಆದಮೇಲೆ ಸಮಯ ಕೇಳುವುದು ಸರಿಯಲ್ಲ ಎಂಬುದಾಗಿ ಜಾಮೀನಿಗೆ ಆಕ್ಷೇಪಿಸಿದರು. ಅಲ್ಲದೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಸ್ಟಡಿಗೆ ನೀಡಿವಂತೆ ಪಟ್ಟು ಹಿಡಿದರು.
ಆಗ ಹೆಚ್.ಡಿ ರೇವಣ್ಣ ಪರ ವಕೀಲರು ಈಗಾಗಲೇ ಮಹಿಳೆ ಅಪಹರಣ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದಾರೆ. ಆಗಲೇ ಅವರನ್ನು ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಬೇಕಾಗಿತ್ತು. ಈಗ ಮತ್ತೆ ಕಸ್ಟಡಿಗೆ ಕೇಳುತ್ತಿರುವುದು ಸರಿಯಲ್ಲ ಎಂಬುದಾಗಿ ಹೇಳಿದರು.
ಈ ವಾದ ಪ್ರತಿವಾದ ಆಲಿಸಿದಂತ ನ್ಯಾಯಪೀಠವು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದ್ರೇ ಕೋರ್ಟ್ ವಿಚಾರಣೆಗೆ ಗೈರಾಗಿದ್ದ ವೇಳೆಯಲ್ಲಿ ಹೊಳೆನರಸೀಪುರ ಲೌಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣಗೆ ಜಾಮೀನು ನೀಡದಂತೆ ಎಸ್ಐಟಿ ಆಕ್ಷೇಪಿಸಿತು. ಈ ವಿಷಯ ತಿಳಿದಂತ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಮಧ್ಯಾಹ್ನದ ವೇಳೆಗೆ ಕೋರ್ಟ್ ಗೆ ಖುದ್ದು ವಿಚಾರಣೆಗೆ ಹಾಜರಾದರು.
ಹೆಚ್ ಡಿ ರೇವಣ್ಣ ಪರ ವಕೀಲರ ವಾದ, ಎಸ್ಐಟಿ ಎಸ್ ಪಿಪಿಯ ಪ್ರತಿವಾದ ಆಲಿಸಿದಂತ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು, ಜಾಮೀನು ಅರ್ಜಿಯ ಆದೇಶವನ್ನು ಕಾರ್ಯದಿರಿಸಿದೆ.
ರಾಜ್ಯದ ರೈತರಿಗೆ ಬೆಳೆ ಪರಿಹಾರದ ಬಗ್ಗೆ ಮಹತ್ವದ ಮಾಹಿತಿ: ನಿಮ್ಮ ಖಾತೆಗೆ ಬಂದಿದ್ಯಾ ಅಂತ ಹೀಗೆ ಚೆಕ್ ಮಾಡಿ
‘ಆಧಾರ್ ಕಾರ್ಡ್’ ನವೀಕರಿಸಲು ಈ ದಿನವೇ ಲಾಸ್ಟ್ ಡೇಟ್ : ಈ ಸರಳ ರೀತಿಯಲ್ಲಿ ‘ಅಪ್ ಡೇಟ್’ ಮಾಡಿಸಿಕೊಳ್ಳಿ