ನವದೆಹಲಿ: ಶ್ರೀಲಂಕಾ ಮತ್ತು ಪಾಕಿಸ್ತಾನಿ ಪ್ರಜೆಯನ್ನು ಒಳಗೊಂಡ ಹೈದರಾಬಾದ್ ಗೂಢಚರ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಕರ್ನಾಟಕದ ಮೈಸೂರಿನಲ್ಲಿ ಅಪರಾಧಿ ನೂರುದ್ದೀನ್ನನ್ನು ಬಂಧಿಸಿದೆ. ಎನ್ಐಎ ಪ್ರಕಾರ, ನೂರುದ್ದೀನ್ಗೆ ಐದು ಲಕ್ಷ ರೂಪಾಯಿ ನಗದು ಬಹುಮಾನವಿತ್ತು.
ಎನ್ಐಎ ಮನೆ ಶೋಧ ನಡೆಸಿದ್ದು, ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್, ಪೆನ್ ಡ್ರೈವ್ಗಳು ಮತ್ತು ಡ್ರೋನ್ಗಳು ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಪಾಕಿಸ್ತಾನಿ ಪ್ರಜೆಯ ಆಜ್ಞೆಯ ಮೇರೆಗೆ ನಕಲಿ ಭಾರತೀಯ ಕರೆನ್ಸಿಯ ಮೂಲಕ ರಾಷ್ಟ್ರ ವಿರೋಧಿ ಗೂಢಚರ್ಯೆ ಚಟುವಟಿಕೆಗಳಿಗೆ ಧನಸಹಾಯ ನೀಡುವಲ್ಲಿ ನೂರುದ್ದಿನ್ ಭಾಗಿಯಾಗಿದ್ದಾನೆ ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.