ನವದೆಹಲಿ: ವಿಶ್ವಾದ್ಯಂತ ಹೆಚ್ಚುತ್ತಿರುವ ಹೃದಯರಕ್ತನಾಳದ ಕಾಯಿಲೆಗಳ ಅಪಾಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಮುಖ ಎಚ್ಚರಿಕೆ ನೀಡಿದೆ. ಡಬ್ಲ್ಯುಎಚ್ಒ ಪ್ರಕಾರ, ಯುರೋಪ್ನಲ್ಲಿ ಪ್ರತಿದಿನ ಸುಮಾರು 10,000 ಜನರು ಹೃದಯರಕ್ತನಾಳದ ಕಾಯಿಲೆಗಳಿಂದ ಸಾಯುತ್ತಿದ್ದಾರೆ, ಅಂದರೆ ವಾರ್ಷಿಕವಾಗಿ 4 ಮಿಲಿಯನ್ ಸಾವುಗಳು ಕಂಡು ಬಂದಿವೆ ಎನ್ನಲಾಗಿದೆ.
ಈ ಸಾವುಗಳು ಯುರೋಪಿನ ಒಟ್ಟು ಸಾವುಗಳಲ್ಲಿ 40% ರಷ್ಟಿದೆ! ಅಂದರೆ, ವಾರ್ಷಿಕವಾಗಿ 40 ಲಕ್ಷ ಜನರು ಸಾಯುತ್ತಾರೆ ಅಂಥ ತಿಳಿಸಿದೆ. “ಉಪ್ಪಿನ ಸೇವನೆಯನ್ನು ಶೇಕಡಾ 25 ರಷ್ಟು ಕಡಿಮೆ ಮಾಡಲು ಉದ್ದೇಶಿತ ನೀತಿಗಳನ್ನು ಜಾರಿಗೆ ತರುವುದರಿಂದ 2030 ರ ವೇಳೆಗೆ ಸುಮಾರು 900,000 ಹೃದಯರಕ್ತನಾಳದ ಕಾಯಿಲೆಗಳ ಸಾವುಗಳನ್ನು ತಡೆಯಬಹುದು” ಎಂದು ಡಬ್ಲ್ಯುಎಚ್ಒ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಜ್ ಹೇಳಿದ್ದಾರೆ.ಯುರೋಪ್ನಲ್ಲಿ, 30 ರಿಂದ 79 ವರ್ಷದೊಳಗಿನ ಮೂವರು ವಯಸ್ಕರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ, ಮುಖ್ಯವಾಗಿ ಹೆಚ್ಚಿನ ಉಪ್ಪಿನ ಸೇವನೆಯಿಂದಾಗಿ. ಯುರೋಪಿಯನ್ ಪ್ರದೇಶದ 53 ದೇಶಗಳಲ್ಲಿ 51 ದೇಶಗಳಲ್ಲಿ, ದಿನಕ್ಕೆ ಸರಾಸರಿ ಉಪ್ಪಿನ ಸೇವನೆಯು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ 5 ಗ್ರಾಂ (ಒಂದು ಟೀಸ್ಪೂನ್) ಗಿಂತ ಹೆಚ್ಚಾಗಿದೆ. ಸಂಸ್ಕರಿಸಿದ ಆಹಾರ ಮತ್ತು ತಿಂಡಿಗಳಲ್ಲಿ ಉಪ್ಪಿನ ಅತಿಯಾದ ಬಳಕೆ ಇದಕ್ಕೆ ಕಾರಣ ಎನ್ನಲಾಗಿದೆ.
ಅಧಿಕ ಉಪ್ಪಿನ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಹೃದಯರಕ್ತನಾಳದ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ” ಎಂದು ಡಬ್ಲ್ಯುಎಚ್ಒ ಹೇಳಿದೆ. ಡಬ್ಲ್ಯುಎಚ್ಒ ಯುರೋಪ್ ವರದಿಯ ಪ್ರಕಾರ, ಈ ಪ್ರದೇಶದ ಪುರುಷರು ಮಹಿಳೆಯರಿಗಿಂತ ಹೃದಯರಕ್ತನಾಳದ ಕಾಯಿಲೆಗಳಿಂದ ಸಾಯುವ ಸಾಧ್ಯತೆ ಸುಮಾರು 2.5 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾವು ಪಶ್ಚಿಮ ಯುರೋಪಿಗಿಂತ ಚಿಕ್ಕ ವಯಸ್ಸಿನಲ್ಲಿ (30-69 ವರ್ಷಗಳು) ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಸಾಧ್ಯತೆ ಸುಮಾರು ಐದು ಪಟ್ಟು ಹೆಚ್ಚಾಗಿದೆ. ಈ ಮಾಹಿತಿಯಿಂದ, ಉಪ್ಪಿನ ಸೇವನೆಯನ್ನು ಕಡಿಮೆ ಮಾಡಲು ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಕಡಿಮೆ ಉಪ್ಪು ತಿನ್ನುವ ಮೂಲಕ, ನಾವು ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ಹೃದ್ರೋಗಗಳಿಂದ ರಕ್ಷಿಸಬಹುದಂತೆ.
NEW: Cardiovascular diseases kill 10,000 Europeans a day: WHOhttps://t.co/GAvuMWcn7l
— Insider Paper (@TheInsiderPaper) May 15, 2024