ಬೆಂಗಳೂರು: ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಅಭ್ಯರ್ಥಿಯನ್ನಾಗಿ ದಿನಾಂಕ 11-05-2024ರಂದು ಇ.ಸಿ ನಿಂಗರಾಜುಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಆದರೇ ಇದೀಗ ದಿಢೀರ್ ಅಭ್ಯರ್ಥಿ ಬದಲಾವಣೆ ಮಾಡಲಾಗಿದ್ದು, ವಿವೇಕಾನಂದ ಕೆ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷರಾದಂತ ಹೆಚ್.ಡಿ ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅದರಲ್ಲಿ ವಿವೇಕಾನಂದ ಕೆ ಇವರನ್ನು ದಿನಾಂಕ 03-06-2024ರಂದು ನಡೆಯಲಿರುವ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಮತ್ತು ಜನತಾದಳ ಪಕ್ಷದ ಮೈತ್ರಿ ಅಭ್ಯರ್ಥಿಯೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ ದೇವೇಗೌಡ ಅವರು ಘೋಷಿಸಿದ್ದಾರೆ ಎಂದಿದ್ದಾರೆ.
ಅಂದಹಾಗೇ ದಿನಾಂಕ 11-05-2024ರಂದು 6 ವಿಧಾನಪರಿಷತ್ ಚುನಾವಣಾ ಕ್ಷೇತ್ರಗಳಿಗೆ ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿತ್ತು. ಮೂರು ಪದವೀಧರರ ಕ್ಷೇತ್ರಗಳು ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಆ ವೇಳೆಯಲ್ಲಿ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಇ.ಸಿ ನಿಂಗರಾಜುಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಈಗ ಅವರನ್ನು ಬದಲಾಯಿಸಿ, ವಿವೇಕಾನಂದ ಕೆ ಅವರಿಗೆ ಟಿಕೆಟ್ ನೀಡಲಾಗಿದೆ.
ಅಶ್ಲೀಲ ವೀಡಿಯೋ ಕೇಸ್: ಇಂದು ತಡರಾತ್ರಿ ಅಥವಾ ನಾಳೆ ಬೆಂಗಳೂರಿಗೆ ‘ಪ್ರಜ್ವಲ್ ರೇವಣ್ಣ’ ವಾಪಾಸ್?
BREAKING : ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ