ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಜಾಮೀನು ಬಳಿಕ ಇಂದು ಬಿಡುಗಡೆಯಾಗಿದ್ದರು. ಆ ಬಳಿಕ ಟೆಂಪಲ್ ರನ್ನ ಕೂಡ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ಮೊದಲ ಪ್ರತಿಕ್ರಿಯೆ ಏನು ನೀಡಿದ್ರು ಅಂತ ಮುಂದೆ ಓದಿ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬರುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಪದ್ಮನಾಭ ನಗರದ ನಿವಾಸದಲ್ಲಿ ಭೇಟಿಯಾದರು. ಆ ಬಳಿಕ, ಅಲ್ಲಿನ ದೇವರ ಕೋಣೆಗೆ ತೆರಳಿ ಪೂಜೆ ಕೂಡ ನೆರವೇರಿಸಿದ್ದಾರೆ.
ಅಲ್ಲಿಂದ ಬೆಂಗಳೂರಿನ ಜೆಪಿ ನಗರದಲ್ಲಿ ಇರುವಂತ ತಿರುಮಲ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ತೆರಳಿದಂತ ಅವರು, ವಿಶೇಷ ಪೂಜೆಯನ್ನು ಸಲ್ಲಿಸಿದರು. ಜೊತೆಗೆ ಕುಂಬಳಕಾಯಿ, ಈಡುಗಾಯಿ ಹೊಡೆದು ದೃಷ್ಠಿ ತೆಗೆಸಿ, ಒಬ್ಬರೇ ಪೂಜೆ ಮಾಡಿದ್ರು. ಅಲ್ಲಿಂದ ಬಸವನಗುಡಿಯಲ್ಲಿರುವಂತ ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ತೆರಳಿದಂತ ಅವರು, ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿಂದ ನೇರವಾಗಿ ಬೆಂಗಳೂರಿನ ನಿವಾಸಕ್ಕೆ ತೆರಳಿದಂತ ಅವರು, ಸಂಪ್ರದಾಯದಂತೆ ಮನೆ ಒಳಗೆ ಹೋಗಿ, ಕೆಲ ಕಾಲವಿದ್ದು, ಹೊರ ಬಂದರು.
ತಮ್ಮ ನಿವಾಸದ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನನಗೆ ಕಾನೂನಿನ ಮೇಲೆ ಗೌರವವಿದೆ. ಕೋರ್ಟ್ ಆದೇಶ ನಾನು ಪಾಲಿಸುತ್ತೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ. ನನ್ನ ವಿರುದ್ಧದ ಆರೋಪದಿಂದ ಮುಕ್ತನಾಗುತ್ತೇನೆ ಎಂಬುದಾಗಿ ಮೊದಲ ಪ್ರತಿಕ್ರಿಯೆಯನ್ನು ನೀಡಿದರು.
ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ‘ಪಾಪಿ ತಂದೆ’
ವಿಜಯಪುರ : ಮೂರು ಮಕ್ಕಳ ಸಾವಿನ ಪ್ರಕರಣ : ಪಾಲಿಕೆ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ‘FIR’ ದಾಖಲು