ಬೆಂಗಳೂರು: ನಿಗದಿ ಮಾಡಿದ ಸಂಬಳಕ್ಕಿಥ ಕಡಿಮೆ ಸಂಬಳ ನೀಡುತ್ತಿರುವ ಹಿನ್ನಲೆಯಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರಿಂದ ದಿಢೀರ್ ಪ್ರತಿಭಟನೆ ನಡೆಸಿದ ಸನ್ನಿವೇಶ ಕಂಡು ಬಂದಿದೆ.
ಇನ್ನೂ ಶಾಂತಿನಗರ ಡಿಪೋ- 3 ರ ಮುಂದೆ ಬಸ್ಸನ್ನು ಹೊರ ತೆಗೆಯದೇ ತಮಗೆ ಬರಬೇಕಾಗಿರುವ ಸಂಬಂಳಕ್ಕಾಗಿ ಡ್ರೈವರ್‌ಗಳು ಪ್ರತಿಭಟಿಸಿದರು. ಇನ್ನೂ ಸನ್ನಿವೇಶವನ್ನು ಅರಿತುಕೊಂಡು ಶೀಘ್ರವೇ ಬಿಎಂಟಿಸಿ ಅಧಿಕಾರಿಗಳು ವೇತನ ನೀಡುವ ಭರವಸೆ ನೀಡಿದ ಬಳಿಕ ಮಧ್ಯಾಹ್ನ ಮುಷ್ಕರವನ್ನು ಹಿಂದಕ್ಕೆ ಪಡೆದು ಚಾಲಕರು ಕರ್ತವ್ಯಕ್ಕೆ ಹಾಜರಾದರು ಎನ್ನಲಾಗಿದೆ.