ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದೆ.
ಇಂದು ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಡೆಸಿತು. ವಾದ-ಪ್ರತಿವಾದವನ್ನು ಆಲಿಸಿದಂತ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು, ಜಾಮೀನು ಅರ್ಜಿಯ ಸಂಬಂಧದ ಆದೇಶವನ್ನು ಸಾಧ್ಯವಾದ್ರೆ ಇಂದು ಸಂಜೆ 5 ಗಂಟೆಯವರೆಗೆ ತೀರ್ಪು ಪ್ರಕಟಿಸೋದಾಗಿ ಆದೇಶವನ್ನು ಕಾಯ್ದಿರಿಸಿದರು.
ಅಂದಹಾಗೇ ರೇವಣ್ಣ ಪುತ್ರ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ರೇಣ್ಣಗೆ ಜಾಮೀನು ನೀಡಿದ್ರೆ ಸಾಕ್ಷ್ಯಾಧಾರ ನಾಶಪಡಿಸಬಹುದು. ಆರೋಪಿ ಪ್ರಭಾವಿ ಎಂಬ ಅಂಶವನ್ನು ಪರಿಗಣಿಸಬೇಕು. ಇದು ಕೆವಲ ಬೆದರಿಕೆ ಹಾಕಿರುವ ಪ್ರಕರಣವಲ್ಲ. ಅಪಹರಣವಾದ ಮಹಿಳೆ ಅತ್ಯಾಚಾರದ ಸಂತ್ರಸ್ತೆ, ಮಹಿಳೆಯ ದೂರು ದಾಖಲಾಗಬಾರದೆಂದು ಅಪಹರಿಸಲಾಗಿತ್ತು. ಇತರೆ ಮಹಿಳೆಯರು ದೂರು ನೀಡದೆ ತಡೆಯುವ ಯತ್ನವಿದೆ. ಜಾಮೀನು ನೀಡಿದ್ರೆ ನ್ಯಾಯಾದಾನ ಹಾದಿಗೆ ತೊಡಕಾಗಬಹುದು ಎಂದು ವಾದವನ್ನು ಮಂಡಿಸಿದ್ರು.
ಹೆಚ್. ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದು, ಮೇ. 2 ಕ್ಕೂ ಮುನ್ನ ಅಪಹರಣದ ದೂರನ್ನೇಕೆ ನೀಡಲಿಲ್ಲ. ವಿಳವಂಬಕ್ಕೆ ಕಾರಣವನ್ನೂ ದೂರುದಾರ ತನ್ನ ಹೇಳಿಕೆ ನೀಡಿಲ್ಲ. ಮಹಿಳೆ ಹೆಚ್.ಡಿ. ರೇವಣ್ಣವರಿಗೆ ರಕ್ತ ಸಂಬಂಧಿಯಾಗಬೇಕು. ಆಕೆ ಹೆಚ್. ರೇವಣ್ಣನವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ಹೇಳಿದರು.
ಅಂತಿಮವಾಗಿ ಈ ಎಸ್ಐಟಿ ಎಸ್ ಪಿಪಿ ವಾದ, ಹೆಚ್.ಡಿ ರೇವಣ್ಣ ಪರ ವಕೀಲರ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದಾರೆ. ಇಂದು ಸಂಜೆ 5 ಗಂಟೆಯ ವೇಳೆಗೆ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ತೀರ್ಪು ಹೊರ ಬೀಳೋ ಸಾಧ್ಯತೆ ಇದೆ.
ಲೋಕಸಭೆ ನಂತರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ ಕೂಟದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ: ಡಿಸಿಎಂ ಡಿಕೆಶಿ ವಿಶ್ವಾಸ
BREAKING: ‘ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ’ ಸೇರಿ ಇಬ್ಬರ ವಿರುದ್ಧ ‘FIR’ ದಾಖಲು