ಬೆಂಗಳೂರು: ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕಲ್ಲೂ ಆಪರೇಷನ್ ಆಗಲಿದೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂಬುದಾಗಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿದ್ದರು. ಆದ್ರೇ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಆಪರೇಷನ್ ನಾಥ ಸಾಧ್ಯವಿಲ್ಲ. ನಮ್ಮ ಶಾಸಕರು ಯಾರು ಮಾರಾಟಕ್ಕೆ ಇಲ್ಲ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಹಾರಾಷ್ಟ್ರ ಸಿಎಂ ಭ್ರಮೆಯಲ್ಲಿ ಇದ್ದಾರೆ. ಈಗಾಗಲೇ ಆಪರೇಷನ್ ಮಾಡೋದಕ್ಕೆ ಪ್ರಯತ್ನ ಪಟ್ಟು ವಿಫಲವಾಗಿದೆ. ಈಗ ಮತ್ತೆ ಪ್ರಯತ್ನ ಮಾಡ್ತಾರೆ. ಆದರೇ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಪರೇಷನ್ ಮಾಡೋಕೆ ಸಾಧ್ಯವಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ನಾವು ಕರ್ನಾಟಕದಲ್ಲಿ 20 ಸೀಟು ಗೆಲ್ಲುತ್ತೇವೆ. ಅವರು ಸೋಲಲಿದ್ದಾರೆ. ಅದಕ್ಕೆ ಹೀಗೆ ಹತಾಶರಾಗಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸೋ ಹೇಳಿಕೆ ನೀಡುತ್ತಿದ್ದಾರೆ ಎಂಬುದಾಗಿ ಮಹಾರಾಷ್ಟ್ರ ಸಿಎಂ ಶಿಂಧೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದರು.
‘ಕರ್ನಾಟಕ ಕಾಂಗ್ರೆಸ್ ಸರ್ಕಾರ’ಕ್ಕೆ ಬಿಗ್ ಆಪತ್ತು: ಲೋಕಸಭಾ ಚುನಾವಣೆ ಬಳಿಕ ಪತನ? ‘ಮಹಾ ಸಿಎಂ’ ಸುಳಿವು
ಅಶ್ಲೀಲ ವಿಡಿಯೋ ಕೇಸ್ : ಪ್ರಜ್ವಲ್ ರೇವಣ್ಣಗೆ ‘ರೆಡ್ ಕಾರ್ನರ್’ ನೋಟಿಸ್ ನೀಡಲು ‘SIT’ ಪ್ಲ್ಯಾನ್