ಬೆಂಗಳೂರು : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಆಹಾರ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಬೆಂಗಳೂರು ಒನ್, ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಮಾತ್ರ ಹೊಸ ಪಡಿತರ ಚೀಟಿಗೆ ಪರಿಗಣಿಸಲು ಆಹಾರ ಇಲಾಖೆ ನಿರ್ಧರಿಸಿದೆ.
ಹೊಸ ಪಡಿತರ ಚೀಟಿಗಾಗಿ ಖಾಸಗಿ ಸೈಬರ್ ಕೇಂದ್ರಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಮಾನ್ಯ ಮಾಡದಿರಲು ಆಹಾರ ಇಲಾಖೆ ತೀರ್ಮಾನಿಸಿದ್ದು, ಸೈಬರ್ ಕೇಂದ್ರಗಳು ಹೊಸ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರಿಂದ ಹೆಚ್ಚಿನ ಹಣ ಪಡೆಯುತ್ತವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.
ಜೂನ್ ಮೊದಲ ವಾರದಲ್ಲಿ ಹೊರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಿದ್ದು, ಪ್ರಮುಖ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಅರ್ಹರು ರಾಜ್ಯದ ನಾಗರೀಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ahara.kar.nic.in ಜಾಲತಾಣದ ಮೂಲಕ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ಪಡಿತರ ಚೀಟಿ ( New Ration Card ) ಪಟ್ಟಿ ಯಲ್ಲಿ ಹೆಸರು ಇಲ್ಲದ ಎಲ್ಲಾ ಜನರು ಈಗ ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು, ಜೊತೆಗೆ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಕರ್ನಾಟಕದಲ್ಲಿ ಹೊಸ ಎಪಿಎಲ್ / ಬಿಪಿಎಲ್ ಪಡಿತರ ಚೀಟಿಗೆ ( BPL, APL Ration Card ) ಹೇಗೆ ಅರ್ಜಿ ಸಲ್ಲಿಸಬಹುದು.? ಅದಕ್ಕೆ ಬೇಕಿರುವಂತ ದಾಖಲೆಗಳು ಯಾವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬೇಕಿರುವ ಅಗತ್ಯ ದಾಖಲೆಗಳು
ವೋಟರ್ ಐಡಿ
ಆಧಾರ್ ಕಾರ್ಡ್
ವಯಸ್ಸಿನ ಪ್ರಮಾಣ ಪತ್ರ
ಡ್ರೈವಿಂಗ್ ಲೈಸೆನ್ಸ್
ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
ಮೊಬೈಲ್ ಸಂಖ್ಯೆ
ಸ್ವಯಂ ಘೋಷಿತ ಪ್ರಮಾಣ ಪತ್ರ
ಈ ಮೇಲ್ಕಂಡ ದಾಖಲೆಗಳಿದ್ದಲೇ, ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಹಾಗಾದ್ರೇ ಅರ್ಜಿ ಸಲ್ಲಿಸೋದು ಹೇಗೆ ಎನ್ನುವ ಹಂತ ಈ ಕೆಳಗಿದೆ.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಶುಲ್ಕ
ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ಆದ್ರೇ ಪಡಿತರ ಚೀಟಿ ಬಂದ ನಂತ್ರ, ಸಂಬಂಧ ಪಟ್ಟಂತ ಅಧಿಕಾರಿಯಿಂದ ಪಡೆಯಲು ರೂ.100 ಪಾವತಿಸಬೇಕಿದೆ.