ತುಮಕೂರು : ಹೆಂಡತಿ ಕೂಲಿ ಕೆಲಸಕ್ಕೆ ಹೋದ ವೇಳೆ ಮಗಳ ಮೇಲೆ ತಂದೆಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಗಾಂಧಿನಗರದ ಹಿಪ್ಪೇತೋಪಿನಲ್ಲಿ ನಡೆದಿದೆ.
ಮೇ 6 ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳೆಕಿಗೆ ಬಂದಿದೆ. ಹೆಂಡತಿ ಕೂಲಿ ಕೆಲಸಕ್ಕೆ ಹೊರಗಡೆ ಹೋದಾಗ ತನ್ನ 13 ವರ್ಷದ ಮಗಳ ಮೇಲೆ ತಂದೆ ಅತ್ಯಾಚಾರ ಮಾಡಿದ್ದಾನೆ ಎಂದು ಆತನ ಹೆಂಡತಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಅತ್ಯಾಚಾರ ಮಾಡಿದ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಪೋಕ್ಸೋ ಕಾಯ್ದೆಯಡಿಯಲ್ಲಿ ಅತ್ಯಾಚಾರಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.